ಸಭೆ ಮಧ್ಯೆಯೇ ಎದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಧಿಕ್ಕಾರ ಕೂಗಿದ ಬಿಜೆಪಿಗರು; ಯಾಕೆ ಗೊತ್ತಾ?

ಸಭೆ ಮಧ್ಯೆಯೇ ಎದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಧಿಕ್ಕಾರ ಕೂಗಿದ ಬಿಜೆಪಿಗರು; ಯಾಕೆ ಗೊತ್ತಾ?

ಮಂಡ್ಯ: ಬಿಜೆಪಿ ಜನಾಶೀರ್ವಾದ ಯಾತ್ರೆ ಭಾಗವಾಗಿ ಇಂದು ಕೇಂದ್ರ ನೂತನ ಸಚಿವರಾದ ಶೋಭಾ ಕರಂದ್ಲಾಜೆ ಮಂಡ್ಯಕ್ಕೆ ಭೇಟಿ ನೀಡಿದ್ದಾರೆ. ಮಂಡ್ಯಕ್ಕೆ ಭೇಟಿ ನೀಡಿ ಆಲೆಮನೆ ವೀಕ್ಷಣೆ ಸೇರಿದಂತೆ ಹಲವು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹೀಗಿರುವಾಗಲೇ ಸ್ವಪಕ್ಷಿಯರಿಂದಲೇ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ.

ಇಲ್ಲಿನ ಖಾಸಗಿ ಸಮೂದಾಯದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಖಾಸಗಿ ಸಮುದಾಯ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಈ ಸಭೆಗೆ ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ಆಹ್ವಾನಿಸಿಲ್ಲ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.

ಸಭೆ ಮಧ್ಯೆಯೇ ಎದ್ದು ಬಿಜೆಪಿ ಕಾರ್ಯಕರ್ತರು ಶೋಭಾ ಕರಂದ್ಲಾಜೆಗೆ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ಯಾಕೆ ಚಂದಗಾಲು ಶಿವಣ್ಣ ಅವರನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಸಮಾಧಾನ ಮಾಡಲು‌ ಮುಂದಾದ ಶೋಭಾ ಕರಂದ್ಲಾಜೆ ಮಾತಿಗೂ ಕ್ಯಾರೇ ಎನ್ನದೆ ಪ್ರತಿಭಟನೆ ಮುಂದುವರಿಸಲಾಗಿದೆ.

ಇದನ್ನೂ ಓದಿ: ಕೇಂದ್ರದ ನಾಲ್ವರು ನೂತನ ಸಚಿವರಿಂದ ಇಂದಿನಿಂದ ಜನಾಶೀರ್ವಾದ ಯಾತ್ರೆ ಆರಂಭ -ಯಾತ್ರೆಯ ಅಸಲಿ ಉದ್ದೇಶವೇನು‌‌?

ಇದನ್ನೂ ಓದಿ: ದೇಶ ತೊರೆಯಲು ಕಾಬೂಲ್​​ ಏರ್​​ಪೋರ್ಟ್​​​ನಲ್ಲಿ ನೂಕುನುಗ್ಗಲು -ಗುಂಡೇಟಿಗೆ ಮೂವರು ಸಾವು

Source: newsfirstlive.com Source link