ಅಣ್ಣಾವ್ರ ಮೊಮ್ಮಗಳ ಸಿನಿಮಾ ‘ನಿನ್ನ ಸನಿಹಕೆ’ ರಿಲೀಸ್ ಡೇಟ್ ಮುಂದಕ್ಕೆ

ಅಣ್ಣಾವ್ರ ಮೊಮ್ಮಗಳ ಸಿನಿಮಾ ‘ನಿನ್ನ ಸನಿಹಕೆ’ ರಿಲೀಸ್ ಡೇಟ್ ಮುಂದಕ್ಕೆ

“ನಿನ್ನ ಸನಿಹಕೆ” ಸ್ಯಾಂಡಲ್​ವುಡ್​ನ ಅಣ್ಣಾವ್ರ ಮುದ್ದಿನ ಮೊಮ್ಮಗಳು ಧನ್ಯಾ ರಾಮ್ ಕುಮಾರ್​​ ಆಭಿನಯದ ಸಿನಿಮಾ. ಈಗಾಗಲೇ ಚಿತ್ರದ ಹಾಡು ಮತ್ತು ಟ್ರೈಲರ್​ ಮೂಲಕ ಎಲ್ಲರ ಗಮನ ಸೆಳೆದಿರೋ ಈ ಸಿನಿಮಾ ಇದೇ ಆಗಸ್ಟ್​ 20ನೇ ತಾರೀಖು ಬಿಡುಗಡೆ ಆಗಲಿದೆ ಅಂತಾ ಈ ಹಿಂದೆ ನಿನ್ನ ಸನಿಹಕೆ ಚಿತ್ರ ತಂಡ ಚಿತ್ರದ ರಿಲೀಸ್​ ಡೇಟ್​ ಅನೌನ್ಸ್​ ಮಾಡಿತ್ತು.

ಆದ್ರೆ ಕೊರೊನಾ ಹಾವಳಿಯಿಂದಾಗಿ ಇದೀಗ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದೆ ಆಂತಾ ಸ್ವತಃ ಧನ್ಯಾ ರಾಮ್​ ಕುಮಾರ್​ ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ ಮೂಲಕ ತಿಳಿಸಿದ್ದಾರೆ.

 

 

View this post on Instagram

 

A post shared by Dhanya Ramkumar (@dhanya_ramkumar)

“ನಮ್ಮ ನಿನ್ನ ಸನಿಹಕೆ ಚಿತ್ರದ ಎಲ್ಲಾ ಹಾಡು ಮತ್ತು ಟ್ರೈಲರ್​ ಅನ್ನು ನೀವೆಲ್ಲರೂ ನೋಡಿ ಇಷ್ಟಪಟ್ಟು ಹರಸಿ, ಹಾರೈಸಿದ್ದೀರಿ ನಿಮ್ಮೆಲ್ಲರ ನಿರಂತರ ಬೆಂಬಲ ಹಾಗೂ ಚಿತ್ರದ ಮೇಲಿನ ನಿಮ್ಮ ಪ್ರೀತಿಗೆ ತಂಡದ ಪರವಾಗಿ ಈ ಮೂಲಕ ಕೃತಜ್ಙತೆಯನ್ನು ಸಲ್ಲಿಸುತ್ತಿದ್ದೇನೆ ಕೋವಿಡ್​ 19 ಅಸಹಜ ಸ್ಥಿತಿಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೈಟ್​ ಕರ್ಪ್ಯೂ ಮತ್ತು ವೀಕೆಂಡ್​ ಕರ್ಪ್ಯೂ ನಿರ್ಬಂಧ ಇರುವ ಕಾರಣ, ಚಿತ್ರ ವೀಕ್ಷಿಸಲು ಚಿತ್ರ ಮಂದಿರಕ್ಕೆ ಬರುವ ನಮ್ಮ ಪ್ರೇಕ್ಷಕರ ಕಾಳಜಿಯನ್ನು ಪರಿಗಣಿಸಿ ಚಿತ್ರದ ಬಿಡುಗಡೆಯನ್ನು ಕೆಲ ದಿನಗಳ ಕಾಲ ಮುಂದೆ ಹಾಕಬೇಕಾದ ಕಠಿಣ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸುತ್ತಿರುವುದು ವಿಷಾದದ ಸಂಗತಿಯೇ ಸರಿ.

ಆದರೆ ನಿಮ್ಮೆಲ್ಲರ ಸುರಕ್ಷೆ ನಮ್ಮ ಮೊದಲ ಅದ್ಯತೆ ಆಗಿರುವುದರಿಂದ ಹೆಚ್ಚು ದಿನ ತಡ ಮಾಡದೇ ಸದ್ಯದಲ್ಲೇ ಸುರಕ್ಷಿತವಾದ ದಿನಾಂಕದೊಂದಿಗೆ ಚಿತ್ರಮಂದಿರಕ್ಕೆ ಬರುತ್ತೇವೆ ಎಂದು ಈ ಮೂಲಕ ತಿಳಿಸುತ್ತೇವೆ ” ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link