ಜೈಲ್ ಬ್ರೇಕ್​ ಮಾಡಿದ ತಾಲಿಬಾನಿಗಳಿಂದ ಉಗ್ರರ ಬಿಡುಗಡೆ; ISIS, ಅಲ್​ಖೈದಾ ಕೈದಿಗಳೂ ಫ್ರೀ

ಜೈಲ್ ಬ್ರೇಕ್​ ಮಾಡಿದ ತಾಲಿಬಾನಿಗಳಿಂದ ಉಗ್ರರ ಬಿಡುಗಡೆ; ISIS, ಅಲ್​ಖೈದಾ ಕೈದಿಗಳೂ ಫ್ರೀ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ್ನು ತಾಲಿಬಾನಿಗಳು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗೆ ವಶಪಡಿಸಿಕೊಳ್ಳುತ್ತಲೇ ತಾಲಿಬಾನಿಗಳು ಮೊದಲು ಮಾಡಿದ ಕೆಲಸ ಅಲ್ಲಿನ ಜೈಲಿನಲ್ಲಿದ್ದ ಕ್ರಿಮಿನಲ್​ಗಳು, ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು.

ಇದನ್ನೂ ಓದಿ: ಅಫ್ಘಾನಿಸ್ತಾನ ಅಯೋಮಯ; ವಿಮಾನದ ಎಂಜಿನ್ ಮೇಲೆ ಕೂತಿದ್ದ ಇಬ್ಬರು ಕೆಳಗೆ ಬಿದ್ದು ದಾರುಣ ಸಾವು

ಹೀಗೆ ಜೈಲಿನಿಂದ ಬಿಡುಗಡೆಗೊಂಡವರಲ್ಲಿ ಅಲ್​ಖೈದಾ ಉಗ್ರರು ಸಹ ಇದ್ದಾರೆ. ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ಮಾಜಿ ಡೆಪ್ಯುಟಿ ಮೌಲ್ವಿ ಫಖರ್ ಮೊಹಮ್ಮದ್​ನನ್ನೂ ಸಹ ಬಿಡುಗಡೆ ಮಾಡಲಾಗಿದೆ.

 

ಇನ್ನು ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದಂತೆಯೇ ಅಲ್​ಖೈದಾ ಉಗ್ರರು ತಮ್ಮ ವಸ್ತುಗಳನ್ನ ಹೊತ್ತುಕೊಂಡು ಕಾಬೂಲ್​ನ್ನು ತೊರೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ಇಂದು ಅಥವಾ ನಾಳೆ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವ ಸಾಧ್ಯತೆಗಳಿವೆ.

Source: newsfirstlive.com Source link