T20 ವಿಶ್ವಕಪ್​​ನಲ್ಲಿ ಅಫ್ಘಾನಿಸ್ತಾನ ಆಡೋದು ಖಚಿತ..!

T20 ವಿಶ್ವಕಪ್​​ನಲ್ಲಿ ಅಫ್ಘಾನಿಸ್ತಾನ ಆಡೋದು ಖಚಿತ..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಿಕ್ಕಟ್ಟು ಎದುರಾಗಿದೆ. ಇಡೀ ದೇಶವೇ ತಾಲಿಬಾನ್‌ಗಳ ಅಟ್ಟಹಾಸಕ್ಕೆ ನಲುಗುತ್ತಿದೆ. ಹೀಗಾಗಿ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಪಾಲ್ಗೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅದ್ರೀಗ ಈ ಬಗ್ಗೆ ಅಫ್ಘಾನ್ ಕ್ರಿಕೆಟ್ ತಂಡದ ಮಾಧ್ಯಮ ವ್ಯವಸ್ಥಾಪಕ ಹಿಕ್ಮತ್ ಹಸನ್, ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಭಾಗವಹಿಸಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ನಲ್ಲಿ ನಮ್ಮ ತಂಡ ಭಾಗವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಒಳಗೊಂಡ ತ್ರಿಕೋನ ಸರಣಿಯನ್ನು ಆಯೋಜಿಸಲು ಬೋರ್ಡ್ ಉತ್ಸುಕವಾಗಿದೆ. ಆ ಮೂಲಕ ನಾವು ಟಿ20 ವಿಶ್ವಕಪ್​ಗೆ ಸಿದ್ಧತೆ ನಡೆಯುತ್ತಿದ್ದೇವೆ. ಮುಂದಿನ ಕೆಲ ದಿನಗಳಲ್ಲಿ ಆಟಗಾರರು ಕಾಬೂಲ್‌ನಲ್ಲಿ ತರಬೇತಿ ನಡೆಸಲಿದ್ದಾರೆ. ಸದ್ಯ ನಾವು ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಒಳಗೊಂಡ ತ್ರಿಕೋನ ಸರಣಿಗೆ, ಸ್ಥಳವನ್ನ ಹುಡುಕುತ್ತಿದ್ದೇವೆ. ಶ್ರೀಲಂಕಾ ಸೇರಿ ಕೆಲ ದೇಶಗಳೊಂದಿಗೆ ಮಾತು ಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Source: newsfirstlive.com Source link