ಜನರಲ್ ಅಬ್ದುಲ್ ರಶೀದ್ ಮನೆಗೆ ತಾಲಿಬಾನಿಗಳ ದಾಳಿ- ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಅಟ್ಟಹಾಸ

ಜನರಲ್ ಅಬ್ದುಲ್ ರಶೀದ್ ಮನೆಗೆ ತಾಲಿಬಾನಿಗಳ ದಾಳಿ- ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಅಟ್ಟಹಾಸ

ತಾಲಿಬಾನಿಗಳು ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿದ್ದಾರೆ. ಅಫ್ಘಾನಿಸ್ತಾನದ ಒಂದೊಂದೇ ಪ್ರದೇಶವನ್ನು ವಶಪಡಿಸಿಕೊಳ್ಳುತ್ತಾ ಮುನ್ನುಗ್ಗುತ್ತಿರುವ ತಾಲಿಬಾನಿಗಳು, ಸರ್ಕಾರಿ ಅಧಿಕಾರಿಗಳು, ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು ಸೇರಿದಂತೆ ಎಲ್ಲಾ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಈಗ ಮಜರ್​​ ಐ ಶರೀಫ್​​ ನಗರದಲ್ಲಿ ಜನರಲ್ ಅಬ್ದುಲ್ ರಶೀದ್ ದೋಸ್ತುಮ್​​​​ ಮನೆಗೆ ನುಗ್ಗಿದ್ದಾರೆ. ಜನರಲ್ ಅಬ್ದುಲ್ ರಶೀದ್ ದೋಸ್ತುಮ್​​​​ ಮನೆಗೆ ನುಗ್ಗಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ.

ತಾಲಿಬಾನಿಗಳು ಜನರಲ್ ಅಬ್ದುಲ್ ರಶೀದ್ ದೋಸ್ತುಮ್​​​​ ಮನೆಗೆ ನುಗ್ಗಿ ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಅಟ್ಟಹಾಸ ಮೆರೆದಿದ್ದಾರೆ. ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ಟೀ ಕುಡಿಯುತ್ತಾ, ತಿಂಡಿ ತಿನ್ನುತ್ತಾ ಪಾರ್ಟಿ ಮಾಡುತ್ತಿದ್ದಾರೆ. ಗುಂಪು ಗುಂಪುಗಳಾಗಿ ಕೂತು ಸಿಕ್ಕಿದನ್ನೆಲ್ಲಾ ತಿನ್ನುತ್ತಿರುವ ವಿಡಿಯೋ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ.

ಅಧ್ಯಕ್ಷ ಅಶ್ರಫ್​​ ಗನಿ, ಮಾಜಿ ಮುಜಾಹಿದ್ದೀನ್ ನಾಯಕ ಮೊಹಮ್ಮದ್ ಇಸ್ಮಾಯಿಲ್ ಖಾನ್, ಆಂತರಿಕ ಭದ್ರತೆಯ ಉಪ ಮಂತ್ರಿ ಮತ್ತು 207 ಜಾಫರ್ ಕಾರ್ಪ್ಸ್ ಕಮಾಂಡರ್​​ಗಳು ಕೂಡ ತಾಲಿಬಾನಿಗಳಿಗೆ ಶರಣಾಗಿದ್ದಾರೆ. ಕೇವಲ 15 ದಿನಗಳ ಅಂತರದಲ್ಲಿ ತಾವು ಈ ಹಿಂದೆ ಹಿಡಿತ ಕಳೆದುಕೊಂಡಿದ್ದ ಪ್ರದೇಶಗಳ ಪೈಕಿ ಶೇ.50ರಷ್ಟಕ್ಕೂ ಹೆಚ್ಚು ಪ್ರದೇಶಗಳನ್ನು ತಾಲಿಬಾನ್​​ ವಶಕ್ಕೆ ತೆಗೆದುಕೊಂಡಿದೆ.

Source: newsfirstlive.com Source link