ಕೊಟ್ಟ ಮಾತಿನಂತೆ ಪಿ.ವಿ. ಸಿಂಧು ಜೊತೆಗೆ ಐಸ್​ಕ್ರೀಮ್ ಸವಿದ ಪ್ರಧಾನಿ ಮೋದಿ

ಕೊಟ್ಟ ಮಾತಿನಂತೆ ಪಿ.ವಿ. ಸಿಂಧು ಜೊತೆಗೆ ಐಸ್​ಕ್ರೀಮ್ ಸವಿದ ಪ್ರಧಾನಿ ಮೋದಿ

ಟೋಕಿಯೋ ಒಲಿಂಪಿಕ್ಸ್​ನ ಬ್ಯಾಡ್​ಮಿಂಟನ್​ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು ಅವರಿಗೆ ಟೋಕಿಯೋ ಒಲಿಂಪಿಕ್ಸ್​ನಿಂದ ವಾಪಸ್ಸಾಗುತ್ತಿದ್ದಂತೆಯೇ ನಿಮ್ಮ ಜೊತೆಗೆ ಐಸ್​ಕ್ರೀಮ್ ತಿನ್ನುತ್ತೇನೆ ಎಂದು ಪ್ರಧಾನಿ ಮೋದಿ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಪಿ.ವಿ. ಸಿಂಧು ಅವರ ಜೊತೆಯಲ್ಲಿ ಐಸ್​ಕ್ರೀಮ್ ಸವಿದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಿಂದ ಬಂದ ಮೇಲೆ, ಸಿಂಧು ಜೊತೆಗೆ ಐಸ್​ಕ್ರೀಮ್​ ತಿನ್ನೋದಾಗಿ ಪ್ರಧಾನಿ ಮಾತು ಕೊಟ್ಟಿದ್ರು. ಅದ್ರಂತೆ, ಇಂದು ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿ, ಪಿ.ವಿ. ಸಿಂಧು ಜೊತೆಗೆ ಐಸ್​ ಕ್ರೀಂ ಸವಿದಿದ್ದಾರೆ. ಪ್ರಧಾನಿ ಮೋದಿಯವರು, ಎಲ್ಲಾ ಆಟಗಾರರ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಅನ್ನೋ ಕಾರಣಕ್ಕೆ, ಇಂದು ತಮ್ಮ ನಿವಾಸದಲ್ಲಿ ಆತಿಥ್ಯ ನೀಡಲು ಕರೆದಿದ್ದಾಗ, ಪಿ.ವಿ. ಸಿಂಧು ಜೊತೆ ಐಸ್​ಕ್ರೀಂ ಸವಿದಿದ್ದಾರೆ.

 

Source: newsfirstlive.com Source link