ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ವಿನಯ್​ ಗೌಡ.. ಯಾವ ಪಾತ್ರ..?

ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ವಿನಯ್​ ಗೌಡ.. ಯಾವ ಪಾತ್ರ..?

ಮರಳಿ ಮನಸ್ಸಾಗಿದೆ.. ಇದು ಹೊಚ್ಚ ಹೊಸ ಸೀರಿಯಲ್‌. ನಮ್ಮ ಚಂದನ್‌ಕುಮಾರ್ ಖಡಕ್ ಪೊಲೀಸ್ ಆಫೀಸರ್‌ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಧಾರಾವಾಹಿ. ಈ ಧಾರಾವಾಹಿ ಬಗ್ಗೆ ನಾವು ನಿಮಗೆ ತಿಳಿಸಿದ್ವಿ. ಮಾತು ಕೊಟ್ಟ ಮನಸುಗಳ ನಡುವೆ ಪ್ರೀತಿಯ ಸೇತುವೆ ಅನ್ನೋ ಟ್ಯಾಗ್‌ಲೈನ್ ಮೂಲಕ ಬರ್ತಿರೋ ಮರಳಿ ಮನಸ್ಸಾಗಿದೆ ಧಾರಾವಾಹಿಯ ಸದ್ಯ ಸಖತ್​ ಸದ್ದು ಮಾಡ್ತಾಯಿದೆ.

ಇಷ್ಟವಿಲ್ಲದಿದ್ದರೂ ಕೊಟ್ಟ ಮಾತಿಗೆ ಬೆಲೆ ಕೊಟ್ಟು ಚಂದನ್​ ಹುಡುಗಿಯನ್ನು ಮದುವೆಯಾಗ್ತಾನೆ.. ಆದ್ರೆ ಆ ಹುಡುಗಿಗೂ ಈ ಮದುವೆ ಇಷ್ಟವಿರುವುದಿಲ್ಲ. ಒಬ್ಬರನ್ನೊಬ್ಬರು ಇಷ್ಟಪಡದೆ ಮದುವೆಯಾಗಿ ಮುಂದೆ ಅವರು ಹೇಗೆ ಇರ್ತಾರೆ ಏನೆಲ್ಲಾ ಕಷ್ಟಗಳು ಬರಬಹುದು ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾವಸ್ತು.

blank

ಆಗಸ್ಟ್​ 9 ರಂದು ಭರ್ಜರಿಯಾಗಿ ಲಾಂಚ್​ ಆದ ಈ ಧಾರಾವಾಹಿ ಸದ್ಯ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಂದನ್‌ ಜೊತೆ ನಟಿಸ್ತಿರೋದು ನಟಿ ದಿವ್ಯಾ ವಾಗುಕರ್​. ಈ ಧಾರವಾಹಿಯಲ್ಲಿ ಸ್ಪಂದನ ರೋಲ್​ಗೆ ಬಣ್ಣ ಹಚ್ಚಿದ್ದು..ಎಸ್.​ ಪಿ. ವಿಕ್ರಾಂತ್​ ನಾಯಕ್​ ಪತ್ನಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ.

ಇದೀಗ ಮತ್ತೊಂದು ವಿಷಯ ಏನಂದ್ರೆ ಈ ಮುಂಚೆ ಎಡೆಯೂರು ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ಶಿವನ ಪಾತ್ರಕ್ಕೆ ಬಣ್ಣ ಹಚ್ಚಿ. ಬಳಿಕ ಕೋವಿಡ್​ ಕಾರಣದಿಂದಾಗಿ ಆ ಧಾರಾವಾಹಿಯನ್ನು ಕ್ವಿಟ್​ ಮಾಡಿದ ನಟ ವಿನಯ್​ ಗೌಡ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ.

blank

ವಿನಯ್​ ಈ ಧಾರಾವಾಹಿಯಲ್ಲಿ ಚಂದನ್​ ಅಂದ್ರೆ ವಿಕ್ರಾಂತ್​ ನಾಯಕ್ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇವರು ಒಬ್ಬ ಆರ್ಮಿ ಆಪೀಸರ್​ ಆಗಿರುತ್ತಾರೆ. ಕಾರಣಾಂತರಗಳಿಂದ ಚಂದನ್​ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗುತ್ತಾರೆ..ಬಳಿಕ ಡ್ಯೂಟಿ ಮೇಲೆ ಜಮ್ಮುವಿಗೆ ತೆರಳುತ್ತಾರೆ.. ಇದು ಧಾರಾವಾಹಿಗೆ ಒಂದು ಟ್ವಿಸ್ಟ್​ ಕೊಡಲಿದೆಯಂತೆ. ಒಟ್ನಲ್ಲಿ ಹೊಸ ಪ್ರಾಜೆಕ್ಟ್​ನೊಂದಿಗೆ ನಿಮ್ಮನ್ನು ರಂಜಿಸಲು ಸಜ್ಜಾಗಿರುವ ವಿನಯ್​ ಅವರಿಗೆ ಆಲ್​ ದಿ ಬೆಸ್ಟ್​.

Source: newsfirstlive.com Source link