TNS​ ಅಭಿಮಾನಿಗಳಿಗೆ ಸಿಹಿಸುದ್ದಿ.. ಕಿರುತೆರೆಯಲ್ಲಿ ಮತ್ತೆ ಮೋಡಿ ಮಾಡಲಿದೆ ’ಮತ್ತೆ ಮನ್ವಂತರ’

TNS​ ಅಭಿಮಾನಿಗಳಿಗೆ ಸಿಹಿಸುದ್ದಿ.. ಕಿರುತೆರೆಯಲ್ಲಿ ಮತ್ತೆ ಮೋಡಿ ಮಾಡಲಿದೆ ’ಮತ್ತೆ ಮನ್ವಂತರ’

ಟಿ.ಎನ್. ಸೀತಾರಾಮ್ ಅಂದ್ರನೇ ಒಂದು ಬ್ರ್ಯಾಂಡ್…ಅವರೇ ಬೇರೆ ಅವರ ಸ್ಟೈಲೇ ಬೇರೆ..ಈ ಮಾತು ನಾವು ಹೇಳುತ್ತಿಲ್ಲ, ಅವರ ಸೀರಿಯಲ್ ಸರಣಿಗಳನ್ನ ನೋಡಿದ ಪ್ರತಿಯೊಬ್ಬ ಅಭಿಮಾನಿಯ ಮಾತಿದು.

ಮಾಯಾಮೃಗ, ಮುಕ್ತ, ಮನ್ವಂತರ, ಮಹಾ ಪರ್ವ, ಮುಕ್ತ ಮುಕ್ತದಿಂದ ಹಿಡಿದು ಇತ್ತಿಚೀನ ಮಗಳು ಜಾನಕಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳನ್ನು ಕನ್ನಡಕ್ಕೆ ಕೊಡುಗೆ ನೀಡಿದ ಹಿರಿಮೆ ನಿರ್ದೇಶಕ ಟಿ ಎನ್ ಸೀತಾರಾಮ್ ಅವರಿಗೆ ಸಲ್ಲುತ್ತದೆ…ಈಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರಂತೆ ಟಿಎನ್​ಎಸ್​.

blank

ಮಗಳು ಜಾನಕಿ ಸೀರಿಯಲ್​ ಅರ್ಧಕ್ಕೆ ನಿಂತಿತ್ತು..ಇದನ್ನು ಮತ್ತೆ ಶುರು ಮಾಡಿ ಎಂಬ ಕೂಗು ಜೋರಾಗಿತ್ತು. ಈ ನಡುವೆ ಪ್ರೇಕ್ಷಕರ ಮುಂದೆ ಮತ್ತೆ ಮನ್ವಂತರ ತರುತ್ತಿದ್ದಾರೆ ನಿರ್ದೇಶಕ ಟಿ ಎನ್ ಸೀತಾರಾಮ್……

ಈಗಾಗಲೇ ಮತ್ತೆ ಮನ್ವಂತರ ಧಾರಾವಾಹಿಗೆ ಶಾಸ್ತ್ರೋಕ್ತವಾಗಿ ಮುಹೂರ್ತ ಮಾಡಲಾಗಿದ್ದು..ಚಿತ್ರಿಕರಣ ಪ್ರಾರಂಭವಾಗಿದೆ.
ಹಲವು ವರ್ಷಗಳ ಹಿಂದೆ ಪ್ರಸಾರವಾಗಿದ್ದ ಮನ್ವಂತರ ಸೀರಿಯಲ್​ಗೆ ವೀಕ್ಷಕರು ಫಿದಾ ಆಗಿದ್ದರು..ಈಗ ಅದೇ ಕಥೆಯ ಸೀಕ್ವೆನ್ಸ್​ ರೀತಿಯಲ್ಲಿ ಸೀರಿಯಲ್‌ನ ಮುಂದುವರಿದ ಭಾಗದಂತೆ ಮತ್ತೆ ಮನ್ವಂತರ ಇರಲಿದೆ ಎಂಬಂತೆ ಕಾಣುತ್ತಿದೆ.

blank

ಯಶಸ್ವಿ ಸೀರಿಯಲ್‌ಗಳಲ್ಲಿ ಒಂದಾದ ಮನ್ವಂತರದಲ್ಲಿ ಮಾಳವಿಕಾ ಅವಿನಾಶ್‌, ನಿರಂಜನ್‌ ದೇಶಪಾಂಡೆ, ಅಜಿತ್‌ ಹಂದೆ, ಮೇಧಾ ವಿದ್ಯಾಭೂಷಣ್‌, ಮೇಘಾ ನಾಡಿಗೇರ್‌, ಸುಂದರ್‌, ಚಂದನ್‌ ಶಂಕರ್‌, ಪ್ರಶಾಂತ್‌ ಶೆಟ್ಟಿ ಹೀಗೆ ದೊಡ್ಡ ತಾರಾ ಬಳಗವೆ ಇರಲಿದೆ.
ಮತ್ತೆ ಮನ್ವಂತರ ಶೀರ್ಷಿಕೆ ಗೀತೆಯನ್ನ ಗಾಯಕ ವಿಜಯ ಪ್ರಕಾಶ್‌ ಹಾಡಿದ್ದು, ಪರಮೇಶ್ವರ ಗುಂಡ್ಕಲ್‌ ಹಾಗೂ ಟಿ.ಎನ್‌.ಸೀತಾರಾಮ್‌ ಸೇರಿ ಕಥೆ ರಚಿಸಿದ್ದಾರೆ.

ಒಟ್ನಲ್ಲಿ ಟಿಎನ್​ಎಸ್​ ಗರಡಿಯಿಂದ ಮತ್ತೊಂದು ಸೀರಿಯಲ್​ ಹಳೆ ಬೇರು ಹೊಸ ಚಿಗುರಿನೊಂದಿಗೆ ಬರುತ್ತಿದ್ದು, ಅಭಿಮಾನಿಗಳಿಗಂತು ಹಬ್ಬ..ಚಿತ್ರೀಕರಣ ಪ್ರಾರಂಭಿಸಿರುವ ಮತ್ತೆ ಮನ್ವಂತರ ತಂಡಕ್ಕೆ ಆಲ್​ ದಿ ಬೆಸ್ಟ್​.

Source: newsfirstlive.com Source link