ಹಲ್ಲಿನ ಸೆಟ್​ ಮುರಿದಳೆಂದು ಬಾಲಕಿಯನ್ನೇ ಕೊಂದ ಪಾಪಿ?

ಹಲ್ಲಿನ ಸೆಟ್​ ಮುರಿದಳೆಂದು ಬಾಲಕಿಯನ್ನೇ ಕೊಂದ ಪಾಪಿ?

ವಿಜಯಪುರ: ಬಾಲಕಿ ಆಟವಾಡುತ್ತಾ ಹಲ್ಲಿನ ಸೆಟ್​ ಮುರಿದಳೆಂಬ ಗೊಡ್ಡು ಕಾರಣಕ್ಕಾಗಿ, ಯುವಕನೋರ್ವ ಆರು ವರ್ಷದ ಬಾಲಕಿಯನ್ನು ದಾರುಣವಾಗಿ ಕೊಂದ ಘಟನೆ ಜಿಲ್ಲೆಯಲ್ಲಿ ದಾಖಲಾಗಿದೆ.

ತನ್ನ ತಾಯಿಯ ಹಲ್ಲಿನ ಸೆಟ್​ ಮುರಿದಳೆಂಬ ಕ್ಷುಲ್ಲಕ ಕಾರಣಕ್ಕಾಗಿ, ಆಕೆಯ ಮಗ ಬಾಲಕಿಯನ್ನ ಕೊಂದ ಘಟನೆ ವಿಜಯಪುರ ಜಿಲ್ಲೆ‌ ಇಂಡಿ ತಾಲೂಕಿನ ಬೋಳೆಗಾಂವ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಂಗನಗೌಡ ಬಾಬುಗೌಡ ಬಿರಾದಾರ್ (24) ಬಂಧಿತ ಆರೋಪಿ. ಆರೋಪಿ ತನ್ನ ತಾಯಿಯ ಹಲ್ಲಿನ ಸೆಟ್​ ಮುರಿದ ಕಾರಣಕ್ಕಾಗಿ ಬಾಲಕಿಯನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಎರಡು ತಿಂಗಳ ಹಿಂದೆ ಕೊಲೆಯಾದ ಬಾಲಕಿ ಹಾಗೂ ಕೊಲೆ ಮಾಡಿದ ಯುವಕನ ಕುಟುಂಬದ ನಡುವೆ ಹಲ್ಲಿನ ಸೆಟ್​ ಮುರಿದ ವಿಚಾರವಾಗಿ ಗಲಾಟೆಯಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಸರ್ಕಾರಿ ಜಾಗದಲ್ಲಿ ಫಸ್ಟ್​ಕ್ಲಾಸ್​ ಪಾರ್ಟಿ ಮಾಡಿದ ಪಂಚಾಯತಿ ನೌಕರರು

ತದನಂತರ ಕಳೆದ ಆಗಸ್ಟ್​ 9, ರಂದು ಬಾಲಕಿ ಕಾಣೆಯಾಗಿದ್ದಾಳೆ. ಈ ಕುರಿತು ಹೊರ್ತಿ ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಬಾಲಕಿ ಗ್ರಾಮದ ಹನುಮಂತ ದೇವರ ದೇವಸ್ಥಾನದ ಬಳಿ ಆಟವಾಡುತ್ತಿದ್ದ ವೇಳೆ, ಆಗಮಿಸಿದ ಆರೋಪಿ ಸಂಗನಗೌಡ, ಬಾಲಕಿಯನ್ನು ಪುಸಲಾಯಿಸಿ ಹೊಲಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದು, ಹಳ್ಳದಲ್ಲಿ ಎಸೆದು ಹೋಗಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

Source: newsfirstlive.com Source link