ಜಪಾನ್ ಪಾಲಾದ ಕರಾವಳಿಯ ಮೊದಲ ಐಟಿ ಕಂಪನಿ ‘ರೋಬೋಸಾಫ್ಟ್..!

ಜಪಾನ್ ಪಾಲಾದ ಕರಾವಳಿಯ ಮೊದಲ ಐಟಿ ಕಂಪನಿ ‘ರೋಬೋಸಾಫ್ಟ್..!

ಉಡುಪಿ: ದೇಶದ ಐಟಿ ರಂಗದಲ್ಲಿ ಮಹತ್ತರವಾದ ಬದಲಾವಣೆಯೊಂದು ನಡೆದಿದೆ. ಕರಾವಳಿ ಭಾಗದ ಮೊದಲ ಐಟಿ ಕಂಪನಿಯಾದ ಉಡುಪಿಯ ‘ರೋಬೋಸಾಫ್ಟ್’ ಜಪಾನ್​ ಮೂಲದ ಐಟಿ ಸಂಸ್ಥೆಯ ಪಾಲಾಗಿದೆ.

ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿಗ್ಗಜ ಸಾಫ್ಟ್ ವೇರ್ ಕಂಪನಿ ರೋಬೋಸಾಫ್ಟ್ ಜಪಾನ್ ಮೂಲದ ‘ಟೆಕ್ನೋ ಪ್ರೊ’ ಸಂಸ್ಥೆಯ ತೆಕ್ಕೆಗೆ ಹೋಗಿದೆ. ಈಗಾಗಲೇ ಬಹುತೇಕ ಮಾರಾಟ ಒಪ್ಪಂದ ಮುಗಿದಿದ್ದು ಸುಮಾರು ಶೇ. 80 ರಷ್ಟು ಶೇರನ್ನು ಜಪಾನ್ ಮೂಲದ ಟೆಕ್ನೋ ಪ್ರೋ ಖರೀದಿಸಿದೆ.

ಜಪಾನ್ ಮೂಲದ ಸಾಫ್ಟ್ ವೇರ್ ಕಂಪನಿ ಟೆಕ್ನೋ ಪ್ರೊ ಖರೀದಿ ಮಾಡಿದರೂ ಕೂಡ ರೋಬೋಸಾಫ್ಟ್ ಹೆಸರಿನಲ್ಲೇ ಕಾರ್ಯಾಚರಿಸಲಿದೆ ಎಂದು ಕಂಪನಿ ತಿಳಿಸಿದೆ.

blank

ಈಗಾಗಲೇ ಸಂಸ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳಿದ್ದಾರೆ ಈ ಪೈಕಿ ಬಹುತೇಕರು ಸ್ಥಳೀಯರು. ಬಹಳ ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ, ಕರಾವಳಿ ಭಾಗದ ಯುವಕ ಯುವತಿಯರು ಒಳ್ಳೆಯ ಹುದ್ದೆಯಲ್ಲಿದ್ದಾರೆ. ಮುಂದೆಯೂ ಕೂಡ ಅವರು ಇಲ್ಲೇ ಮುಂದುವರಿಯಲಿದ್ದಾರೆ. ಜೊತೆಗೆ ಇನ್ನಷ್ಟು ಉದ್ಯೋಗವಕಾಶ ಹೆಚ್ಚಲಿದೆ ಅಂತ ರೋಬೋ ಸಾಫ್ಟ್ ಸ್ಥಾಪಕ ರೋಹಿತ್ ಭಟ್ ಹೇಳಿದ್ದಾರೆ.

ಇದನ್ನೂ ಓದಿ: ಲೈನ್​ಮನ್​ಗಳನ್ನ ಮನೆಗೆ ಕರೆಸಿ ಜೊತೆಯಲ್ಲೇ ಭೋಜನ ಸವಿದ ಇಂಧನ ಸಚಿವ.. ಯಾಕೆ ಗೊತ್ತಾ..?

1996ರಲ್ಲಿ ಉಡುಪಿಯಲ್ಲಿ ಆರಂಭಗೊಂಡ ಸಂಸ್ಥೆ, ಭಾರತೀಯ ಮತ್ತು ಜಾಗತಿಕ ಮಟ್ಟದಲ್ಲಿ ಇಂಟರ್​ನೆಟ್​ ಬ್ರ್ಯಾಂಡ್​ಗಳಿಗೆ ಅಪ್ಲಿಕೇಶನ್​ ಸಿದ್ಧಪಡಿಸುತ್ತಿತ್ತು. ಹಲವಾರು ವರ್ಷಗಳಿಂದ ಸಾಫ್ಟ್​ವೇರ್​ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಜಪಾನ್​ನ ಟೆಕ್ನೋ ಪ್ರೊ ಸಂಸ್ಥೆಯಲ್ಲಿ 21 ಸಾವಿರದಷ್ಟು ಉದ್ಯೋಗಿಗಳಿದ್ದು, ಈ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಸಂಸ್ಥೆಯದ್ದಾಗಿದ್ದು, ಇನ್ನೊಂದು ವರ್ಷದಲ್ಲಿ ಉಳಿದ ಶೇ.20 ರಷ್ಟು ಶೇರು ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಕಂಪನಿಯ ಮೂಲಗಳು ನ್ಯೂಸ್​ಫಸ್ಟ್​ಗೆ ತಿಳಿಸಿವೆ.

Source: newsfirstlive.com Source link