‘ಪೊಲೀಸ್ ಸ್ಟೋರಿ’ಗೆ 25ನೇ ವಸಂತ -ಧನ್ಯವಾದ ಅರ್ಪಿಸಿದ ಸಿಹಿ ಸುದ್ದಿ ಕೊಟ್ಟ ಸಾಯಿಕುಮಾರ್

‘ಪೊಲೀಸ್ ಸ್ಟೋರಿ’ಗೆ 25ನೇ ವಸಂತ -ಧನ್ಯವಾದ ಅರ್ಪಿಸಿದ ಸಿಹಿ ಸುದ್ದಿ ಕೊಟ್ಟ ಸಾಯಿಕುಮಾರ್

ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯಿಸಿ, ಭರ್ಜರಿ ಯಶಸ್ಸು ಕಂಡಿದ್ದ ‘ಪೊಲೀಸ್ ಸ್ಟೋರಿ’ ಚಿತ್ರ ತೆರೆಕಂಡು ಆಗಸ್ಟ್ 16ಕ್ಕೆ 25 ವರ್ಷ ಪೂರೈಸಿದೆ. ಈ ಚಿತ್ರ 1996 ರಲ್ಲಿ ಈ ಚಿತ್ರ ತೆರೆ ಕಂಡಿತ್ತು. ಅಲ್ಲದೇ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಚಿತ್ರ ಭರ್ಜರಿ ಜಯಭೇರಿ ಬಾರಿಸಿತ್ತು.

ಇಪ್ಪತ್ತೈದು ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಟ ಸಾಯಿಕುಮಾರ್, ಚಿತ್ರ ಯಶಸ್ಸಿಗೆ ಕಾರಣರಾದ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಚಿತ್ರ ಯಶಸ್ಸು ಕಾಣಲು ಮಾಧ್ಯಮದವರ ಹಾಗೂ ಕನ್ನಡ ಕಲಾಭಿಮಾನಿಗಳ ಪಾಲು ಬಹು ದೊಡ್ಡದು. ಅವರಿಗೆ ವಿಶೇಷ ಧನ್ಯವಾದ ಅಂತಾ ಸಾಯಿಕುಮಾರ್ ಹೇಳಿದ್ದಾರೆ.

ಈ ಶುಭ ಸಂದರ್ಭದಲ್ಲಿ ಮತ್ತೇ ಇದೇ ತಂಡದೊಂದಿಗೆ ಸದ್ಯದಲ್ಲೇ ನೂತನ ಚಿತ್ರ ಆರಂಭಿಸುವ ಯೋಚನೆಯಿದೆ ಎಂದು ಸಾಯಿಕುಮಾರ್ ತಿಳಿಸಿದ್ದಾರೆ.

Source: newsfirstlive.com Source link