ಆ. 23ರಿಂದ ಶಾಲೆ ಆರಂಭ: ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ತಪ್ಪದೇ ಈ ಮಾರ್ಗಸೂಚಿ ಓದಿ

ಆ. 23ರಿಂದ ಶಾಲೆ ಆರಂಭ: ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ತಪ್ಪದೇ ಈ ಮಾರ್ಗಸೂಚಿ ಓದಿ

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23ರಿಂದ ರಾಜ್ಯದಲ್ಲಿ ಶಾಲೆ ಆರಂಭ ಹಿನ್ನೆಲೆ ರಾಜ್ಯ ಸರ್ಕಾರ ಶಾಲಾ ಆರಂಭದ ಮಾರ್ಗಸೂಚಿ ಪ್ರಕಟಿಸಿದೆ. ಆಗಸ್ಟ್ 23 ರಿಂದ 9 ರಿಂದ 12 ನೆ ತರಗತಿಗಳ ಭೌತಿಕ ತರಗತಿಗಳು ಪ್ರಾರಂಭವಾಗುತ್ತಿದ್ದು, ಸಕಲ ಸಿದ್ಧತೆಯಲ್ಲಿ ತೊಡಗಿದ ಶಿಕ್ಷಣ ಇಲಾಖೆ ಶಿಕ್ಷಣ ಸಚಿವರ ಜೊತೆ ಸಭೆ ನಡೆಸಿ ಇದೀಗ 9 ರಿಂದ 12ನೇ ತರಗತಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಇನ್ನು ಈ ಬಾರಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಾಲೆಗಳಿಗೆ ಪ್ರತ್ಯೇಕವಾದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ.

ಮಾರ್ಗಸೂಚಿಯಲ್ಲೇನಿದೆ?

 1. ಆಗಸ್ಟ್ 23 ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಾತ್ರ ತರಗತಿ ನಡೆಸುವಂತೆ ಸೂಚನೆ.
 2. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ.
 3. ಶನಿವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.50 ರ ವರೆಗೆ ತರಗತಿ ನಡೆಯಲಿದೆ.
 4. ಕೋವಿಡ್ 19 ಸೋಂಕಿನ ಪ್ರಮಾಣ 2%ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಆರಂಭ.
 5. ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ತರಗತಿ ನಡೆಸಲು ತಿಳಿಸಲಾಗಿದೆ.
 6. ಅವಶ್ಯಕತೆ ಅನುಸಾರ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
 7. ತರಗತಿ ನಡೆಸಲು ಅಗತ್ಯ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಪ್ರತಿ ಕೊಠಡಿಯಲ್ಲಿ 15 ರಿಂದ 20 ಮಕ್ಕಳಿಗೆ ಮಾತ್ರ ಅವಕಾಶ ನೀಡಬೇಕು
 8. ಶಾಲೆಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳು ಈಗಿರುವ ಆನ್ಲೈನ್ ಶಿಕ್ಷಣ ಮುಂದುವರಿಸಬಹುದು ಇದಕ್ಕೆ ಪೂರಕವಾದ ವ್ಯವಸ್ಥೆ ಶಾಲೆ ವತಿಯಿಂದ ಆಗಬೇಕು.

ಶಾಲೆಗಳಿಗೆ.

 • ಇಡೀ ಶಾಲೆಗೆ ಸ್ಯಾನಿಟೈಸ್ ಮಾಡುವುದು ಕಡ್ಡಾಯ
 • ಶಾಲೆ ಪೀಠೋಪಕರಣಗಳಿಗೂ ಸ್ಯಾನಿಟೈಸ್ ಕಡ್ಡಾಯ
 • ಶಾಲೆ ಆವರಣದಲ್ಲಿ ಅಂತರಕ್ಕೆ ಗುರುತು ಹಾಕಬೇಕು
 • ವಿದ್ಯಾರ್ಥಿಗಳು ಪ್ರವೇಶಿಸುವ ಜಾಗದಲ್ಲಿ ವೃತ್ತ ಗುರುತು
 • 3 ರಿಂದ 6 ಅಡಿ ಅಂತರದಲ್ಲಿ ವೃತ್ತ ಗುರುತು ಮಾಡಬೇಕು
 • ದಟ್ಟಣೆ ತಪ್ಪಿಸಲು ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ಮಾರ್ಗ
 • ನಿಯಮಗಳ ಬಗ್ಗೆ ಸೂಚನಾ ಫಲಕಗಳು ಹಾಕಬೇಕು
 • ಪ್ರವೇಶ ದ್ವಾರದಲ್ಲಿ ಕೈಗಳಿಗೆ ಸ್ಯಾನಿಟೈಸ್ ಕಡ್ಡಾಯ
 • ಶಾಲೆ ಎಂಟ್ರಿಯಲ್ಲೇ ಥರ್ಮಲ್ ಸ್ಕ್ರೀನಿಂಗ್ ಇರಬೇಕು
 • ಶಾಲೆಗಳಲ್ಲಿ ಸಭೆ, ಸಮಾರಂಭ ಹಮ್ಮಿಕೊಳ್ಳಬಾರದು
 • ಮಕ್ಕಳು ರಸ್ತೆ ಬದಿ ಆಹಾರ ಸೇವಿಸದಂತೆ ಸೂಚಿಸಬೇಕು
 • ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ ಅತ್ಯಗತ್ಯ
 • ಮಾರ್ಗಸೂಚಿ ಪಾಲನೆ ವೀಕ್ಷಿಸಲು ಶಿಕ್ಷಕರ ನೇಮಿಸಬೇಕು
 • ಶಿಕ್ಷಕರನ್ನೇ ನೋಡಲ್ ಅಧಿಕಾರಿಯಾಗಿ ನೇಮಿಸಬೇಕು

ವಿದ್ಯಾರ್ಥಿಗಳಿಗೆ:

 • ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಲ್ಲ
 • ಶಾಲೆಗೆ ಕಳುಹಿಸುವುದು ಪೋಷಕರ ತೀರ್ಮಾನ
 • ಪೋಷಕರಿಂದ ಒಪ್ಪಿಗೆಯ ಲಿಖಿತ ಪತ್ರ ಕಡ್ಡಾಯ
 • ಸೋಂಕು ಲಕ್ಷಣ ಇದ್ದರೆ ಐಸೊಲೇಟ್ ಮಾಡ್ಬೇಕು
 • ಲಕ್ಷಣ ಇದ್ದರೆ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಬೇಕು
 • ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇರಿಸಬೇಕು
 • ಕುಡಿಯುವ ನೀರು, ತಿಂಡಿ ಮನೆಯಿಂದ ತರಬೇಕು
 • ಪರಸ್ಪರ ವಸ್ತುಗಳನ್ನು ವಿನಿಮಯ ಮಾಡಬಾರದು
 • ಶಿಕ್ಷಕರು, ಶಾಲಾ ಸಿಬ್ಬಂದಿಗೂ ನಿಯಮ ಅನ್ವಯ

ಶಿಕ್ಷಕರಿಗೆ:

 • ಶಿಕ್ಷಕರು ಕಡ್ಡಾಯ ಮಾಸ್ಕ್ ಧರಿಸಿ ಹಾಜರಾಗಬೇಕು
 • 50 ವರ್ಷ ಮೀರಿದ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು
 • ಶಿಕ್ಷಕರು ಲಸಿಕೆ ಪಡೆದಿದ್ದಾರೆಯೇ ಖಚಿತಪಡಿಸಿಕೊಳ್ಳಲಿ
 • ಶಿಕ್ಷಕರು ಲಸಿಕೆ ಪಡೆಯದಿದ್ದರೆ ಕೂಡಲೇ ಕೊಡಿಸಲು ಕ್ರಮ
 • ಶಿಕ್ಷಕರಿಗೆ ಸೋಂಕು ಲಕ್ಷಣವಿದ್ದರೆ ಹಾಜರಾಗಬಾರದು
 • ಸೋಂಕು ಲಕ್ಷಣ ಇದ್ದರೆ ಶಿಕ್ಷಕರು ರಜೆ ಪಡೆಯಬೇಕು
 • ಮತ್ತೆ ಶಾಲೆಗೆ ಹಾಜರಾಗಲು ಕೋವಿಡ್ ವರದಿ ತರಬೇಕು

Source: newsfirstlive.com Source link