ಕೊನೆಯ ದಿನ ಲಾರ್ಡ್ಸ್​​ ಟೆಸ್ಟ್​ಗೆ ಟ್ವಿಸ್ಟ್​ ನೀಡಿದ ಶಮಿ, ಬೂಮ್ರಾ

ಕೊನೆಯ ದಿನ ಲಾರ್ಡ್ಸ್​​ ಟೆಸ್ಟ್​ಗೆ ಟ್ವಿಸ್ಟ್​ ನೀಡಿದ ಶಮಿ, ಬೂಮ್ರಾ

ಭಾರತ – ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್​ ಪಂದ್ಯ ಅಂತಿಮ ಘಟ್ಟ ತಲುಪಿದೆ. ಕೊನೆಯ ದಿನದಾಟದ ಊಟದ ವಿರಾಮದ ವೇಳೆಗೆ ಭಾರತ 8 ವಿಕೆಟ್​ ನಷ್ಟಕ್ಕೆ 286 ರನ್​ಗಳಿಸಿದ್ದು, 259 ರನ್​ಗಳ ಮುನ್ನಡೆಯಲ್ಲಿದೆ. 6 ವಿಕೆಟ್​​ ನಷ್ಟಕ್ಕೆ 181 ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲಿಯೇ ರಿಷಭ್​ ಪಂತ್​ ವಿಕೆಟ್​ ಕಳೆದುಕೊಂಡಿತು. ಪಂತ್​ ಬೆನ್ನಲ್ಲೇ 16 ರನ್​ಗಳಿಸಿದ್ದ ಇಶಾಂತ್​ ಶರ್ಮಾ ಕೂಡ ಔಟಾದ್ರು. ಆದ್ರೆ, ಆ ಬಳಿಕ ಜೊತೆಯಾದ ಮೊಹಮದ್​ ಶಮಿ, ಜಸ್​ಪ್ರಿತ್​ ಬೂಮ್ರಾ ಇಂಗ್ಲೆಂಡ್​ ಬೌಲರ್​​ಗಳ ತಾಳ್ಮೆಯನ್ನೇ ಪರೀಕ್ಷಿಸಿದ್ರು. ಎಚ್ಚರಿಕೆಯ ಜೊತೆಗೆ ಬಿರುಸಿನ ಆಟವಾಡಿದ ಈ ಜೋಡಿ ಅಜೇಯ 77 ರನ್​ಗಳ ಕಾಣಿಕೆ ನೀಡಿತು.

ಅಬ್ಬರದ ಆಟವಾಡಿದ ಮೊಹಮದ್​ ಶಮಿ ಅರ್ಧಶತಕ ಸಿಡಿಸಿ ಅಜೇಯರಾಗುಳಿದರೆ, ಜಸ್​​ಪ್ರಿತ್​ ಬೂಮ್ರಾ 30 ರನ್​ಗಳೊಂದಿಗೆ ಕ್ರಿಸ್​​ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಮೊದಲ ಸೆಷನ್​ನಲ್ಲಿ 26 ಓವರ್​ಗಳನ್ನಾಡಿದ ಭಾರತ 2 ವಿಕೆಟ್​​ ಕಳೆದುಕೊಂಡು 105 ರನ್​ಗಳಿಸಿತು.

 

Source: newsfirstlive.com Source link