ಪೊಲೀಸರ ಮಿಂಚಿನ ದಾಳಿ: ಮಂಗಳೂರಿನಲ್ಲಿ 1,400 ಕೆ.ಜಿ. ಸ್ಫೋಟಕ ವಸ್ತುಗಳ ಪತ್ತೆ

ಪೊಲೀಸರ ಮಿಂಚಿನ ದಾಳಿ: ಮಂಗಳೂರಿನಲ್ಲಿ 1,400 ಕೆ.ಜಿ. ಸ್ಫೋಟಕ ವಸ್ತುಗಳ ಪತ್ತೆ

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಪೋಟಕ ತಯಾರಿಕೆಗೆ ಬಳಸುವ, ಕಚ್ಚಾವಸ್ತುಗಳನ್ನು ದಾಸ್ತಾನಿಟ್ಟ ಗೋಡೌನ್​ ಮೇಲೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಕಚ್ಚಾವಸ್ತುಗಳನ್ನು ಜಫ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಸಹ ಬಂಧಿಸಿದ್ದಾರೆ..

blank

ಮಂಗಳೂರಿನ ಬಂದರು ಪ್ರದೇಶದ ಗೋಡೌನ್ ಒಂದರ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಸ್ಫೋಟಕ ತಯಾರಿಕೆಗೆ ಬಳಸುವ 1,400 ಕೆ.ಜಿ ಕಚ್ಚಾವಸ್ತುಗಳನ್ನು ವಶ ಪಡಿಸಿಕೊಂಡು, ಕಚ್ಚಾವಸ್ತುಗಳನ್ನು ಶೇಖರಿಸಿ ಇಟ್ಟಿದ್ದ ಆನಂದ ಗಟ್ಟಿ ಎಂಬಾತನನ್ನು ಬಂಧಿಸಿದ್ದಾರೆ.. ಬಂಧಿತ ಆರೋಪಿ ಬಂದರು ಏರಿಯಾದಲ್ಲೇ ಗನ್ ಶಾಪ್ ಹೊಂದಿರುವುದಾಗಿ ಹೇಳಲಾಗಿದೆ.

blank

ದಾಳಿಯ ವೇಳೆ 400 kg ಸಲ್ಫರ್ ಪೌಡರ್, 350 kg ಪೊಟ್ಯಾಸಿಯಮ್‌ ನೈಟ್ರೇಟ್, 50 kg ಬೇರಿಯಂ ನೈಟ್ರೇಟ್, 395 kg ಪೊಟ್ಯಾಸಿಯಮ್‌ ಕ್ಲೋರೈಟ್, 240 kg ಚಾರ್ ಕೋಲ್, 260 kg ಅಲ್ಯೂಮಿನಿಯಂ ಪೌಡರ್, 30kg ಪಿಸ್ತೂಲ್ ಪೆಲೆಟ್ಸ್ ವಶಪಡಿಸಿಕೊಂಡಿದ್ದಾರೆ. ಇನ್ನು ಪ್ರಕರಣ ಕುರಿತು ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ..

Source: newsfirstlive.com Source link