ಶಮಿ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್ ಬೌಲರ್ಸ್​..!

ಶಮಿ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್ ಬೌಲರ್ಸ್​..!

ಭಾರತ – ಇಂಗ್ಲೆಂಡ್​​ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ವೇಗಿ ಮೊಹಮದ್​ ಶಮಿ ಅಂಗ್ಲರ ಪಾಲಿಗೆ ನುಂಗಕಾರದ ತುತ್ತಾಗಿ ಪರಿಣಮಿಸಿದ್ದಾರೆ. ಭಾರತವನ್ನ ಬೇಗನೇ ಆಲೌಟ್​ ಮಾಡಿ ಇನ್ನಿಂಗ್ಸ್​​ ಆರಂಭಿಸಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಇಂಗ್ಲೆಂಡ್​ ಪಾಳಯಕ್ಕೆ ಶಮಿ ಶಾಕ್​ ನೀಡಿದ್ರು. ರಿಷಭ್​ ಪಂತ್​ ನಿರ್ಗಮನದ ಬಳಿಕ ಕಣಕ್ಕಿಳಿದ ಮೊಹಮದ್​ ಶಮಿ, ಆಂಗ್ಲ ಬೌಲರ್​ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದ್ರು.

ಎಚ್ಚರಿಕೆಯ ಆಟದೊಂದಿಗೆ ಹಲವು ಬಿರುಸಿನ ಹೊಡೆತಗಳನ್ನೂ ಭಾರಿಸಿದ ಶಮಿ, ಸಿಕ್ಸರ್​ನೊಂದಿಗೆ ಅರ್ಧಶತಕವನ್ನೂ ಪೂರೈಸಿದ್ರು. ಮೊಯಿನ್​ ಆಲಿ ಎಸೆದ 106ನೇ ಓವರ್​ನ 2ನೇ ಎಸೆತವನ್ನ ಸಿಕ್ಸರ್​ಗಟ್ಟಿದ ಶಮಿ, ಟೆಸ್ಟ್​ ಮಾದರಿಯ 2ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಮೊದಲ ಸೆಷನ್​ ಅಂತ್ಯಕ್ಕೆ 67 ಎಸೆತಗಳನ್ನ ಎದುರಿಸಿರುವ ಶಮಿ 5 ಬೌಂಡರಿ, 1 ಸಿಕ್ಸರ್​ ನೆರವಿನೊಂದಿಗೆ 52 ರನ್​ಗಳಿಸಿ ಕ್ರಿಸ್​ ಕಾಯ್ದುಕೊಂಡಿದ್ದಾರೆ.

Source: newsfirstlive.com Source link