ತಾಲಿಬಾನಿಗಳ ಜೊತೆಗೆ ಪಾಕ್, ಚೀನಾ ಸ್ನೇಹ.. ಭಾರತದ ಮುಂದಿರುವ ಸವಾಲುಗಳೇನು..?

ತಾಲಿಬಾನಿಗಳ ಜೊತೆಗೆ ಪಾಕ್, ಚೀನಾ ಸ್ನೇಹ.. ಭಾರತದ ಮುಂದಿರುವ ಸವಾಲುಗಳೇನು..?

ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ತನ್ನ ವಶಕ್ಕೆ ಪಡೆದುಕೊಂಡಿವೆ. ಇಂದು ಅಥವಾ ನಾಳೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಲಿದೆ. ಇದು ಅಫ್ಘಾನಿಸ್ತಾನದ ಜನತೆಯ ಪಾಲಿಗೆ ಕರಾಳ ಅಧ್ಯಾಯವೆಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ತೆರಳುವ ಮೂಲಕ ಪ್ರಾಣ ಉಳಿಸಿಕೊಳ್ಳಲು ಅಲ್ಲಿನ ಜನ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನ ಅಯೋಮಯ; ವಿಮಾನದ ಎಂಜಿನ್ ಮೇಲೆ ಕೂತಿದ್ದ ಇಬ್ಬರು ಕೆಳಗೆ ಬಿದ್ದು ದಾರುಣ ಸಾವು

ತಾಲಿಬಾನಿಗಳ ಜೊತೆ ಸ್ನೇಹ ಬೆಳೆಸಲು ಮುಂದಾದ ಚೀನಾ

ಇದರ ಮುಂದುವರಿದ ಭಾಗವಾಗಿ ಚೀನಾ ಅಫ್ಘಾನಿಸ್ತಾನದ ತಾಲಿಬಾನಿಗಳ ಜೊತೆಗೆ ಸ್ನೇಹ ಸಂಬಂಧ ಬೆಳೆಸಲು.. ಅಫ್ಘಾನ್​ನಲ್ಲಿ ತಾಲಿಬಾನಿಗಳು ಸ್ವತಂತ್ರವಾಗಿ ತಮ್ಮ ಹಕ್ಕನ್ನು ಸಾಧಿಸುವುದನ್ನು ಚೀನಾ ಗೌರವಿಸುತ್ತದೆ ಎಂದು ಹೇಳುವ ಮೂಲಕ ಚೀನಾ ಮುಂದಾಗಿದೆ. ಇದು ಕಮ್ಯುನಿಸ್ಟ್ ಮತ್ತು ಮೂಲಭೂತವಾದಿಗಳ ನಡುವಿನ ಸಂಬಂಧ ಬೆಸೆಯುವ ಮಾತೇ ಆದರೂ ಈ ಎರಡು ದೇಶಗಳ ನಡುವಿನ ಸ್ನೇಹ ಭವಿಷ್ಯದ ಅನಾಹುತಗಳಿಗೆ ಸಾಕ್ಷಿಯಾಗಬಹುದು ಎಂಬುದನ್ನ ಅಳೆಯುವಂತಿಲ್ಲ.

ಇದನ್ನೂ ಓದಿ: ಶ್ವೇತಭವನದ ಮುಂದೆ ಅಫ್ಘಾನಿಸ್ತಾನ ಪ್ರಜೆಗಳ ಪ್ರತಿಭಟನೆ; ಸಾವಿರ ಲಾಡೆನ್​ ಹುಟ್ಟುತ್ತಾರೆಂಬ ಆತಂಕ

ತಾಲಿಬಾನ್ ಪಾಕಿಸ್ತಾನ್ ನಡುವಿನ ಸಂಬಂಧ

1990 ರಲ್ಲಿ ತಾಲಿಬಾನ್ ಎಂಬ ಸಂಘಟನೆಯೊಂದು ಹುಟ್ಟಿಕೊಂಡಿದ್ದೇ ಉತ್ತರ ಪಾಕಿಸ್ತಾನದಲ್ಲಿ. ಸೌದಿ ಅರೇಬಿಯಾದಿಂದ ಬರುತ್ತಿದ್ದ ಫಂಡ್​​ನ್ನ ಬಳಸಿಕೊಂಡು ವಿದ್ಯಾರ್ಥಿ ಸಂಘಟನೆಗಳ ಹೆಸರಿನಲ್ಲಿ ಹುಟ್ಟಿಕೊಂಡು ತಾಲಿಬಾನ್ ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಈ ತಾಲಿಬಾನಿಗಳ ಮೂಲ ಉದ್ದೇಶವೇ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ತಮ್ಮದೇ ಸರ್ಕಾರವನ್ನ ಸ್ಥಾಪಿಸಿ ತಮ್ಮದೇ ಆದ ಮೂಲಭೂತವಾದಿ ಕಾನೂನುಗಳನ್ನು ಜಾರಿಗೆ ತರುವುದು. ಆ ಕಾನೂನುಗಳಿಗೆ ಜನರು ತಲೆಬಾಗುವಂತೆ ಮಾಡುವುದು.
ಈಗಲೂ ತಾಲಿಬಾನ್​ ಐಎಸ್​ಐನಂಥ ಉಗ್ರ ಸಂಘಟನೆಯೊಂದಿಗೆ ಕೈ ಜೋಡಿಸಿಕೊಂಡಿದೆ. ಪಾಕಿಸ್ತಾನದಲ್ಲಿ ಐಎಸ್​ಐನಿಂದ ಟ್ರೈನಿಂಗ ಪಡೆದ 30 ಸಾವಿರಕ್ಕೂ ಹೆಚ್ಚು ತಾಲಿಬಾನಿಗಳು ಪಾಕಿಸ್ತಾನದಲ್ಲಿ ಇದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶ ; ರಾಜೀನಾಮೆ ಕೊಟ್ಟು ದೇಶಬಿಟ್ಟ ಅಧ್ಯಕ್ಷ ಅಶ್ರಫ್ ಗನಿ

ಭಾರತದ ಎದುರಿರುವ ಸವಾಲೇನು..?

ಸದ್ಯ ಕಾಬೂಲ್​ನ್ನು ವಶಪಡಿಸಿಕೊಳ್ಳುವ ಮೂಲಕ ಸಂಪೂರ್ಣ ಅಫ್ಘಾನಿಸ್ತಾನದ ಅಧಿಕಾರವನ್ನೇ ತನ್ನ ಕೈವಶ ಮಾಡಿಕೊಂಡಿರುವ ಅಫ್ಘಾನಿಸ್ತಾನ ಇಂದು ಅಥವಾ ನಾಳೆ ತನ್ನದೇ ಸರ್ಕಾರವನ್ನ ಅಫ್ಘಾನಿಸ್ತಾನದಲ್ಲಿ ರಚಿಸುತ್ತದೆ. ಇದಾದ ನಂತರ ಚೀನಾ ಮತ್ತು ಪಾಕಿಸ್ತಾನದ ಐಎಸ್​ಐ ಸಹಾಯ ಪಡೆದು ತನ್ನ ತಾಲಿಬಾನಿ ಪಡೆಗಳನ್ನ ಬೇರ್ಯಾವುದೇ ದೇಶದತ್ತ ಕಳುಹಿಸುವ ಸಾಧ್ಯತೆ ಇದೆ. ಚೀನಾ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಸದ್ಯ ಭಾರತವೇ ನೆರೆರಾಷ್ಟ್ರ. ಗಡಿ ವಿಚಾರದಲ್ಲಿ ಭಾರತ ಚೀನಾ ಮತ್ತು ಪಾಕಿಸ್ತಾನ ನಡುವೆ ಶತ್ರುತ್ವ ಇಂದಿಗೂ ಜೀವಂತವಾಗಿದೆ. ಚೀನಾ ಮತ್ತು ಪಾಕಿಸ್ತಾನ ತಾಲಿಬಾನಿಗಳ ಸಹಾಯ ಪಡೆದರೂ ತಾಲಿಬಾನಿಗಳು ಚೀನಾ ಮತ್ತು ಪಾಕಿಸ್ತಾನದ ಸಹಾಯ ಪಡೆದರೂ ಇದರಿಂದ ಭಾರತಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಅಶ್ರಫ್ ಗನಿ ರಾಜೀನಾಮೆ; ಅಫ್ಘಾನಿಸ್ತಾನ​​​ ಮುಂದಿನ ಅಧ್ಯಕ್ಷ ಮುಲ್ಲಾ ಬರಾದರ್

ಇನ್ನು ಈ ಸವಾಲಿನ ಬಗ್ಗೆ ಈಗಾಗಲೇ ಬಿಜೆಪಿಯ ಇಬ್ಬರು ಪ್ರಮುಖ ನಾಯಕರು ಎಚ್ಚರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಟ್ವೀಟ್ ಮಾಡಿ.. ತಾಲಿಬಾನ್​ ಪಾಕಿಸ್ತಾನದಲ್ಲಿ ಐಎಸ್​ಐನಿಂದ ಟ್ರೈನಿಂಗ್ ಪಡೆದ 30 ಸಾವಿರ ಮರ್ಸಿನರಿಗಳನ್ನು ಹೊಂದಿದೆ. ಈಗ ಕಾಬೂಲ್​ನಲ್ಲಿ ಅಧಿಕಾರಕ್ಕೇರುತ್ತಿದೆ. ತಾಲಿಬಾನ್ ನಾಯಕತ್ವ ಈಗ ಆ ಮರ್ಸಿನರಿಗಳನ್ನು ಪಾಕ್​ನ ಸಹಾಯ ಪಡೆದು ಎಲ್ಲಿಗೆ ಬೇಕಾದರೂ ಸಾಗಿಸಬಹುದು. ಭಾರತ ಈಗ ಗಂಭೀರವಾಗಿ ಭದ್ರತಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಾಲಿಬಾನ್ ಮುಂದೊಂದು ದಿನ ಚೀನಾ ಮತ್ತು ಪಾಕಿಸ್ತಾನವನ್ನು ನುಂಗಬಹುದು.. ಆದರೆ ಸದ್ಯದ ಬೆದರಿಗೆ ಇರುವುದು ಭಾರತಕ್ಕೆ ಎಂದು ಎಚ್ಚರಿಸಿದ್ದಾರೆ.

blank

ತಾಲಿಬಾನ್ ಮೊದಲ ವರ್ಷ ಅಫ್ಘಾನಿಸ್ತಾನ ಸರ್ಕಾರದ ನಾಯಕರಾಗಿ ಮಿತವಾದ ದೃಷ್ಟಿಕೋನ ಹೊಂದಿರುತ್ತದೆ. ಈ ಮಧ್ಯೆ, ಪ್ರಾಂತೀಯ ನಾಯಕರು ನಿಜವಾದ ಕ್ರೂರ ತಾಲಿಬಾನ್ ಹಾರ್ಡ್ ಲೈನರ್‌ಗಳಾಗುತ್ತಾರೆ. ಒಂದು ವರ್ಷದ ನಂತರ ಅಫ್ಘಾನಿಸ್ತಾನವು ಭದ್ರವಾಗುತ್ತದೆ.. ತಾಲಿಬಾನ್, ಪಾಕಿಸ್ತಾನ ಮತ್ತು ಚೀನಾ ಭಾರತದ ಮೇಲೆ ದಾಳಿ ಮಾಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶೇಷ ವರದಿ: ರಾಜಶೇಖರ್ ಬಂಡೆ, ಡಿಜಿಟಲ್ ಮೀಡಿಯಾ

Source: newsfirstlive.com Source link