ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿಯಾದ ತಾಲಿಬಾನ್​​ ನೀಡಿದ ಭರವಸೆಯೇನು?

ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿಯಾದ ತಾಲಿಬಾನ್​​ ನೀಡಿದ ಭರವಸೆಯೇನು?

ಕಾಬೂಲ್​​: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ಹಾಗಾಗಿ ಅಲ್ಲಿನ ಹಿಂದೂ ಮತ್ತು ಸಿಖ್‌ ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲಾಗಿದೆ. ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳು ಅಕ್ಷರಶಃ ಜೀವ ಭಯದಲ್ಲಿ ಬದುಕುತ್ತಿದ್ದಾರೆ.

ಒಂದೆಡೆ ಹೇಗಾದರೂ ಮಾಡಿ ಇವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಪ್ರಯತ್ನಗಳಂತೂ ನಡೆಯುತ್ತಿವೆ. ಇನ್ನೊಂದೆಡೆ ಸ್ಥಳೀಯ ತಾಲಿಬಾನ್​​ ನಾಯಕರು ಅಫ್ಘಾನಿಸ್ತಾನದಲ್ಲಿರುವ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿ ಮಾಡಿ ನಮ್ಮಿಂದ ನಿಮಗೇನು ತೊಂದರೆ ಇಲ್ಲ. ನಿಮಗೆ ಅಗತ್ಯವಿರುವ ಭದ್ರತೆ ನೀಡುತ್ತೇವೆ ಎಂದು ತಾಲಿಬಾನ್​ ಆಶ್ವಾಸನೆ ನೀಡಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಜನರಲ್ ಅಬ್ದುಲ್ ರಶೀದ್ ಮನೆಗೆ ತಾಲಿಬಾನಿಗಳ ದಾಳಿ- ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಅಟ್ಟಹಾಸ

Source: newsfirstlive.com Source link