ಕಾಬೂಲ್​ಗೆ ಬಂದ 1 ಸಾವಿರ ​​ಸೈನಿಕರಿಂದ ಇಂಗ್ಲೆಂಡ್​​ ನಾಗರಿಕರ ರಕ್ಷಣೆ

ಕಾಬೂಲ್​ಗೆ ಬಂದ 1 ಸಾವಿರ ​​ಸೈನಿಕರಿಂದ ಇಂಗ್ಲೆಂಡ್​​ ನಾಗರಿಕರ ರಕ್ಷಣೆ

ಕಾಬೂಲ್​: ತಾಲಿಬಾನಿಗಳಿಗೆ ಅಫ್ಘಾನ್​ ಸರ್ಕಾರ ಅಧಿಕೃತವಾಗಿ ಶರಣಾಗಿದೆ. ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​​ ನಗರವನ್ನು ವಶಪಡಿಸಿಕೊಂಡ ತಾಲಿಬಾನಿಗಳು ತಮ್ಮ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿದ್ದಾರೆ. ಹೀಗಿರುವಾಗಲೇ ಅಫ್ಘಾನಿಸ್ತಾನ ದೇಶಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ವಿಮಾನ ನಿಲ್ದಾಣದಲ್ಲಿ ಫ್ಲೈಟ್​​ ಹತ್ತಲು ಬಂದವರ ನಡುವೆ ನೂಕುನುಗ್ಗಲು ಸಂಭವಿಸುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ವಿಮಾನ ನಿಲ್ದಾಣದಲ್ಲಿ ಸೇರಿದ್ದು, ನಿಯಂತ್ರಿಸಲು ಅಸಾಧ್ಯವಾಗಿದೆ.

ಈ ನಡುವೆ ಕಾಬೂಲ್ ವಿಮಾನ ನಿಲ್ದಾಣಕ್ಕೆ 1 ಸಾವಿರ ಇಂಗ್ಲೆಂಡ್​​​ ಸೈನಿಕರು ಬಂದಿಳಿದಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ತಮ್ಮ ದೇಶದ ನಾಗರಿಕರ ರಕ್ಷಣೆಗಾಗಿ ಇಂಗ್ಲೆಂಡ್​​​ ಸೈನಿಕರು ಕಾಬೂಲ್​​ ನಗರಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ಜನರಲ್ ಅಬ್ದುಲ್ ರಶೀದ್ ಮನೆಗೆ ತಾಲಿಬಾನಿಗಳ ದಾಳಿ- ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಅಟ್ಟಹಾಸ

ಈಗಾಗಲೇ ಕಾಬೂಲ್ ವಿಮಾನ ನಿಲ್ದಾಣವನ್ನು 6 ಸಾವಿರ ಅಮೆರಿಕನ್​ ಟ್ರೂಪ್​ ಸೈನಿಕರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇರೆ ಬೇರೆ ದೇಶಗಳ ನಿವಾಸಿಗಳನ್ನು ಅಫ್ಘಾನಿಸ್ತಾನದಿಂದ ಲಿಫ್ಟ್​ ಮಾಡಲು ನೆರವು ನೀಡುತ್ತಿದ್ದಾರೆ. ಹೀಗಿರುವಾಗಲೇ ತನ್ನ ದೇಶದ ನಿವಾಸಿಗಳನ್ನು ಕರೆದುಕೊಂಡು ಹೋಗಲು 1 ಸಾವಿರ ಇಂಗ್ಲೆಂಡ್​​​ ಸೈನಿಕರು ಬಂದಿದ್ದಾರೆ.

ಇದನ್ನೂ ಓದಿ: ದೇಶ ತೊರೆಯಲು ಕಾಬೂಲ್​​ ಏರ್​​ಪೋರ್ಟ್​​​ನಲ್ಲಿ ನೂಕುನುಗ್ಗಲು -ಗುಂಡೇಟಿಗೆ ಮೂವರು ಸಾವು

Source: newsfirstlive.com Source link