ಸ್ವಿಫ್ಟ್​ ಕಾರ್​ನಲ್ಲಿ ಜಿಲೆಟಿನ್ ಸಾಗಿಸುವಾಗ ಸ್ಫೋಟ; ಛಿದ್ರಛಿದ್ರವಾಯ್ತು ವ್ಯಕ್ತಿಯ ದೇಹ

ಸ್ವಿಫ್ಟ್​ ಕಾರ್​ನಲ್ಲಿ ಜಿಲೆಟಿನ್ ಸಾಗಿಸುವಾಗ ಸ್ಫೋಟ; ಛಿದ್ರಛಿದ್ರವಾಯ್ತು ವ್ಯಕ್ತಿಯ ದೇಹ

ರಾಮನಗರ: ಸ್ವಿಫ್ಟ್ ಕಾರ್​ನಲ್ಲಿ ಜಿಲೆಟಿನ್ ಸಾಗಿಸುವಾಗ ಜಿಲೆಟಿನ್ ಸ್ಫೋಟಗೊಂಡು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕನಕಪುರದ ಮರಳೆಗವಿ ಮಠದಲ್ಲಿ ನಡೆದಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ ಅಯೋಮಯ; ವಿಮಾನದ ಎಂಜಿನ್ ಮೇಲೆ ಕೂತಿದ್ದ ಇಬ್ಬರು ಕೆಳಗೆ ಬಿದ್ದು ದಾರುಣ ಸಾವು

 

ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕ್ವಾರೆಯೊಂದಕ್ಕೆ ಜಿಲೆಟಿನ್ ವಸ್ತು ಸಾಗಿಸುವಾಗ ದುರ್ಘಟನೆ ನಡೆದಿದೆ. ಮಹೇಶ್ ಸಾವನ್ನಪ್ಪಿರುವ ವ್ಯಕ್ತಿ. ಸ್ಫೋಟದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರಛಿದ್ರವಾಗಿದೆ. ಮಹೇಶ್ ಮೂಲತ ಕನಕಪುರ ನಿವಾಸಿಯಾಗಿದ್ದು ಕನಕಪುರ ನಗರದಲ್ಲಿ ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

blank

ಜಿಲೆಟಿನ್ ಸಿಡಿದ ವೇಳೆ ಸ್ವಿಫ್ಟ್ ಕಾರ್​ ಧಗ ಧಗನೆ ಹೊತ್ತು ಉರಿದಿದೆ. ಶಕ್ತಿ ಮೈನಿಂಗ್ಸ್ ಎಂಬ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಡಿ ಮದ್ದುಗಳನ್ನು ಕಾರಿನಲ್ಲಿ ಸಾಗಿಸುವಾಗ ಸ್ಫೋಟ ನಡೆದಿದೆ. ಕೆ.ಎ 51 ಪಿ 3384 ಸ್ವಿಫ್ಟ್ ಕಾರಿನಲ್ಲಿ ಸಿಡಿ ಮದ್ದುಗಳನ್ನು ಸಾಗಿಸುವಾಗ ಈ ಘಟನೆ ನಡೆದಿದೆ.ಇನ್ನು ಕಲ್ಲು ಗಣಿಗಾರಿಕೆಯ ಮಾಲೀಕರು ಶಿವರುದ್ರಪ್ಪ ಮಹಾಸ್ವಾಮಿಗಳು ಮರಳೇ ಗವಿ ಮಠ ಎಂದು ಹೇಳಲಾಗಿದೆ. ರಾಮನಗರ ಜಿಲ್ಲೆಯ ಎಸ್.ಪಿ ಗಿರೀಶ್ ಸ್ಥಳಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ಜಿಲೆಟಿನ್​ ಬಳಸಿ ಸ್ಫೋಟಕ್ಕೆ ಯತ್ನಿಸಿದವರು ಪೊಲೀಸ್​ ಬಲೆಗೆ

Source: newsfirstlive.com Source link