ಸಿದ್ದರಾಮಯ್ಯನವರು ಕನಸಿನ ಲೋಕದಲ್ಲಿದ್ದಾರೆ: ಬಿ.ಸಿ ಪಾಟೀಲ್

ಹಾವೇರಿ: ಸಿದ್ದರಾಮಯ್ಯನವರು ಕನಸಿನ ಲೋಕದಲ್ಲಿದ್ದಾರೆ. ಆದಷ್ಟು ಬೇಗ ಸರ್ಕಾರ ಹೋಗುತ್ತದೆ ಎಂಬ ಯಾವುದೋ ಭ್ರಮೆಯಲ್ಲಿದ್ದಾರೆ. ಆದಷ್ಟು ಬೇಗ ಸರ್ಕಾರ ಹೋಗುತ್ತದೆ. ನಾನು ಮುಂದಿನ ಮುಖ್ಯಮಂತ್ರಿ ಆಗ್ತೀನಿ ಅಂತಾ ಅವರದು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಪ್ರವಾಹದಿಂದ ಉಂಟಾಗಿರೋ ಹಾನಿ ಪರಿಶೀಲನೆ ಮತ್ತು ಕೆರೆಗೆ ಬಾಗಿನ ಅರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ನಂತರ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ. ಇದನ್ನೂ ಓದಿ: ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ಅವರದ್ದು, ಅವರ ಯಾವ ಕನಸುಗಳು ನನಸಾಗೋದಿಲ್ಲ. ಅವರು ಕಾಣ್ತಾ ಇರೋದು ಹಗಲುಗನಸು. ಮತ್ತೆ ಮುಂದಿನ ಬಾರಿ 2023ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾವೇ ಆಡಳಿತ ನಡೆಸುತ್ತೇವೆ ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ.

Source: publictv.in Source link