ಲಾರ್ಡ್ಸ್​ ಟೆಸ್ಟ್​: ಡಿಕ್ಲೇರ್​ ಘೋಷಿಸಿದ ಭಾರತ, ಇಂಗ್ಲೆಂಡ್​ ಗೆಲುವಿಗೆ ಬೇಕು 272 ರನ್

ಲಾರ್ಡ್ಸ್​ ಟೆಸ್ಟ್​: ಡಿಕ್ಲೇರ್​ ಘೋಷಿಸಿದ ಭಾರತ, ಇಂಗ್ಲೆಂಡ್​ ಗೆಲುವಿಗೆ ಬೇಕು 272 ರನ್

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಟೀಮ್​ ಇಂಡಿಯಾ 272 ರನ್​ಗಳ ಗುರಿ ನೀಡಿದೆ. 8 ವಿಕೆಟ್​ ಕಳೆದುಕೊಂಡಿರುವ ಭಾರತ 271 ರನ್​ ಕಲೆ ಹಾಕಿದ್ದು, ಡಿಕ್ಲೇರ್​ ಘೋಷಿಸಿದೆ.

ನಾಲ್ಕನೇ ದಿನದಾಟಕ್ಕೆ 6 ವಿಕೆಟ್​​ ಕಳೆದುಕೊಂಡು ಟೀಮ್​ ಇಂಡಿಯಾ, 181 ರನ್​ ಕಲೆ ಹಾಕಿತ್ತು. ಇಂದು ಐದನೇ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲಿ ರಿಷಭ್​ ಪಂತ್​ ಮತ್ತು ಇಶಾಂತ್​ ಶರ್ಮಾ ಸತತ 2 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯ್ತು. ಆದರೆ ಜಸ್​ಪ್ರಿತ್​ ಬೂಮ್ರಾ ಮತ್ತು ಮೊಹಮ್ಮದ್​ ಶಮಿ ಅದ್ಭುತ ಬ್ಯಾಟಿಂಗ್​ ನೆರವಿನಿಂದ ತಂಡ ಉತ್ತಮ ಮೊತ್ತ ಕಲೆಹಾಕಿದೆ.

ಇನ್ನು ಐದನೇ ಕೊನೆಯ ದಿನದ ಅಂತ್ಯಕ್ಕೆ ಇನ್ನು 59 ಓವರ್​​ಗಳು ಬಾಕಿ ಇದ್ದು, ಇಷ್ಟು ಓವರ್​ಗಳಲ್ಲಿ ಇಂಗ್ಲೆಂಡ್​ 272 ರನ್​ ಗುರಿ ಬೆನ್ನತ್ತಬೇಕಿದೆ. ಸದ್ಯ ಇಂಗ್ಲೆಂಡ್ ಆರಂಭಿಕ ಆಟಗಾರ ರೋರಿ ಬರ್ನ್ಸ್​ ವಿಕೆಟ್​ ಕಳೆದುಕೊಂಡಿದೆ.

Source: newsfirstlive.com Source link