ಡಿ.ಕೆ. ಶಿವಕುಮಾರ್, ಹೆಚ್​.ಡಿ. ದೇವೇಗೌಡರನ್ನ​ ಭೇಟಿ ಮಾಡಿದ ಪ್ರಲ್ಹಾದ್ ಜೋಶಿ

ಡಿ.ಕೆ. ಶಿವಕುಮಾರ್, ಹೆಚ್​.ಡಿ. ದೇವೇಗೌಡರನ್ನ​ ಭೇಟಿ ಮಾಡಿದ ಪ್ರಲ್ಹಾದ್ ಜೋಶಿ

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪುತ್ರಿಯ ಮದುವೆ ಸಂಭ್ರಮದಲ್ಲಿದ್ದಾರೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಚಿವ ಪ್ರಲ್ಹಾದ ಜೋಶಿ ಭೇಟಿ ಮಾಡಿದ್ದಾರೆ. ಸದಾಶಿವನಗರದ  ನಿವಾಸಕ್ಕೆ ಭೇಟಿ ನೀಡಿದ ಅವರು ತಮ್ಮ ಪುತ್ರಿಯ ವಿವಾಹಕ್ಕೆ ಆಗಮಿಸುವಂತೆ ಆಮಂತ್ರಣ ನೀಡಿದ್ದಾರೆ. ಈ ವೇಳೆ ಉಭಯ ಕುಶಲೋಪರಿ ಹಂಚಿಕೊಂಡ ಉಭಯ ನಾಯಕರು ಕೆಲ ಹೊತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳು ಕುರಿತು ಚರ್ಚಿಸಿದ್ದಾರೆ.

blank

ಇನ್ನು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರನ್ನು ಈ ವೇಳೆ  ಭೇಟಿ ಮಾಡಿದ ಸಚಿವರು ಪುತ್ರಿಯ ಮದುವೆ ಸಮಾರಂಭಕ್ಕೆ ಆಗಮಿಸಿ ಆಶೀರ್ವಾದ ನೀಡಬೇಕೆಂದು ಆಮಂತ್ರಣ ನೀಡಿದ್ದಾರೆ.

blank

 

blank

 

Source: newsfirstlive.com Source link