ತನ್ನ ಕೆಲಸ ಮಾಡಿಕೊಟ್ಟಿಲ್ಲವೆಂದು ಇಡೀ ಪಂಚಾಯತಿ ಆಫೀಸ್​ಗೆ ಬೀಗ ಹಾಕಿದ ಗ್ರಾಮಸ್ಥ

ತನ್ನ ಕೆಲಸ ಮಾಡಿಕೊಟ್ಟಿಲ್ಲವೆಂದು ಇಡೀ ಪಂಚಾಯತಿ ಆಫೀಸ್​ಗೆ ಬೀಗ ಹಾಕಿದ ಗ್ರಾಮಸ್ಥ

ಹಾವೇರಿ: ತನ್ನ ಕೆಲಸ ಮಾಡಿ ಕೊಡ್ತಾ ಇಲ್ಲಾ, ಪಂಚಾಯತಿಯಲ್ಲಿ ಯಾವ ಸಿಬ್ಬಂದಿ ಇಲ್ಲ ಅಂತ ವ್ಯಕ್ತಿಯೊಬ್ಬ ಪಂಚಾಯತಿಗೆ ಬೀಗ ಹಾಕಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕುರಬಗೊಂಡ ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ.ಕಿರಣ್​ ಬಡ್ಡಿಕೊಪ್ಪ ಎಂಬ ವ್ಯಕ್ತಿ ಪಂಚಾಯತಿ ಆಫೀಸ್​ಗೆ ಬೀಗ ಹಾಕಿರೋ ವ್ಯಕ್ತಿ. ಕುರಬಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಿರೆಲಿಂಗದಹಳ್ಳಿ ಗ್ರಾಮದ ನಿವಾಸಿಯಾದ ಕಿರಣ್​, ಮನೆ ಇ ಸೋತ್ತು ಕೆಲಸಕ್ಕೆ ಅಲೆದು ಅಲೆದು ಸುಸ್ತಾಗಿ ಈ ಕೆಲಸ ಮಾಡಿದ್ದಾರೆ.  ಸಿಬ್ಬಂದಿ ಇಲ್ಲದ ಕಾರಣ ಪಂಚಾಯತಿ ಖಾಲಿಯಾಗಿದ್ದು,  ಕೆಲಸಕ್ಕೆ ಅಂತಾ ಬಂದು ಬಂದು, ಬರಿಗೈಯಲ್ಲಿ ವಾಪಸ್​ ಹೋಗಿದ್ದಾರೆ. ಹೀಗಾಗಿ ಕೀಲಿ ತೆಗೆದುಕೊಂಡು ಬಂದು ಬೀಗ ಜಡಿದಿದ್ದಾರೆ. ಅಲ್ಲದೇ, ಅಧಿಕಾರಿಗಳು ಬರುವವರೆಗೂ ಕೀಲಿ ತೆಗೆಯೊದಿಲ್ಲಾ ಎಂದು ಪಟ್ಟು ಹಿಡಿದು ಕೂತಿದ್ದಾರೆ.

Source: newsfirstlive.com Source link