ತಾಲಿಬಾನಿಗಳು ಅಂದ್ರೆ ಏನು?; ತಾಲಿಬಾನ್​​ ಮುಖ್ಯಸ್ಥ ಅಬ್ದುಲ್ ಗನಿ ಯಾರು..?

ತಾಲಿಬಾನಿಗಳು ಅಂದ್ರೆ ಏನು?; ತಾಲಿಬಾನ್​​ ಮುಖ್ಯಸ್ಥ ಅಬ್ದುಲ್ ಗನಿ ಯಾರು..?

ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡು ಸರ್ಕಾರ ರಚನೆಗೆ ಮುಂದಾದ ತಾಲಿಬಾನ್​​​ ಬಗ್ಗೆ ಇಡೀ ಪ್ರಪಂಚವೇ ಮಾತಾಡುತ್ತಿದ್ದಾರೆ. ಇಂತಹ ತಾಲಿಬಾನ್​ ಸಂಘಟನೆ ಹೇಗೆ ಹುಟ್ಟಿಕೊಂಡಿತು ಮತ್ತು ಇದರ ಸಿದ್ದಾಂತವೇನು ಎಂಬುದರ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.

ಹೌದು, ತಾಲಿಬ್​ ಪದದ ಅರ್ಥ ವಿದ್ಯಾರ್ಥಿಗಳು ಅಥವಾ ಮುಮುಕ್ಷು ಎಂದು. ತಾಲಿಬಾನ್ ಅಂದ್ರೆ ಧರ್ಮದ ವಿದ್ಯಾರ್ಥಿಗಳ ಸಮೂಹ, ಇದೇ ಹೆಸರಿನಲ್ಲಿ ಆರಂಭವಾದ ತೀವ್ರವಾದಿಗಳ ಗುಂಪು ಈ ತಾಲಿಬಾನ್​​. ದಿಯೋಬಂದಿ ಇಸ್ಲಾಮಿಸ್ಟ್​ ಮೂಮೆಂಟ್ ಆಗಿರೋ ತಾಲಿಬಾನ್, ಅಫ್ಘಾನಿಸ್ತಾನದ ಮಿಲಿಟರಿ ಆರ್ಗನೈಜೇಶನ್ ಕೂಡ ಹೌದು. ಜಿಹಾದ್​ ಮೂಲಕ ಹೋರಾಟ ನಡೆಸುವ ತಾಲಿಬಾನ್,​ ಅಫ್ಘಾನ್ ಸಿವಿಲ್​ ವಾರ್​​​ ವೇಳೆ ಹುಟ್ಟಿಕೊಂಡಿತ್ತು.

blank

ಪ್ರಮುಖವಾಗಿ ಮದರಸಾ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಒಕ್ಕೂಟ, 1994ರಲ್ಲಿ ತಾಲಿಬಾನ್ ಆರಂಭ ಮಾಡಿದರು. ಮೊಹಮ್ಮದ್ ಓಮರ್​ ನೇತೃತ್ವದಲ್ಲಿ ಬಲಗೊಂಡ ಸಂಘಟನೆ, 1996-2001ರ ತನಕ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿತು. ಹಿಂಸೆ ಮಾರ್ಗದಿಂದ ಶರಿಯಾ ಜಾರಿಗೆ ತಂದ ತಾಲಿಬಾನ್, 5 ವರ್ಷದಲ್ಲಿ ಮಾಡಬಾರದ್ದನ್ನೆಲ್ಲ ಮಾಡಿತ್ತು. ಶರಿಯಾವನ್ನ ಕಟ್ಟು ನಿಟ್ಟಾಗಿ ಜಾರಿಗೆ ತಂದಿದ್ದ ತಾಲಿಬಾನ್,​ ಅಫ್ಘಾನಿಸ್ತಾನದಲ್ಲಿ ಅಸಂಖ್ಯಾತ ಹತ್ಯಾಕಾಂಡ ನಡೆಸಿತ್ತು.

ಇದನ್ನೂ ಓದಿ: ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿಯಾದ ತಾಲಿಬಾನ್​​ ನೀಡಿದ ಭರವಸೆಯೇನು?

1,60,000 ಹಸಿದ ಜನರಿಗೆ ವಿಶ್ವ ಸಂಸ್ಥೆಯಿಂದ ಆಹಾರ ಪೂರೈಕೆಗೆ ತಡೆದಿತ್ತು ತಾಲಿಬಾನ್​​. ಹಸಿವೆಯಿಂದ ಜನ ಸತ್ತರೂ ಸಹಾಯವನ್ನ ತಡೆದಿದ್ದ ನಿಷ್ಕರುಣಿ ಈ ತಾಲಿಬಾನ್. ಸಾವಿರಾರು ಎಕರೆ ಫಲವತ್ತಾದ ಭೂಮಿಗೆ ಬೆಂಕಿ ಹಾಕಲಾಗಿತ್ತು. ಈ ಮೂಲಕ ಫಲವತ್ತಾದ ಭೂಮಿಯನ್ನ ಬರಡು ಮಾಡಿದ್ದ ತಾಲಿಬಾನ್, ಲಕ್ಷಾಂತರ ಮನೆಗಳಿಗೂ ಬೆಂಕಿ ಇಟ್ಟು ಭಯ ಮೂಡಿಸಿದ್ದ ಉಗ್ರ ಸಂಘಟನೆ.

blank

ಪೇಂಟಿಂಗ್, ಆಟ, ಸಿನಿಮಾ, ಸಂಗೀತ, ಫೊಟೋಗ್ರಫಿ ಎಲ್ಲ ಬ್ಯಾನ್ ಮಾಡಿದ್ದ ಈ ಸಂಘಟನೆ, ಮಹಿಳೆಯರ ಎಲ್ಲ ಹಕ್ಕುಗಳನ್ನೂ ಹತ್ತಿಕ್ಕಿತು. ಸಾಂಸ್ಕೃತಿಕ ಹತ್ಯಾಕಾಂಡವನ್ನೂ ನಡೆಸಿದ್ದ ತಾಲಿಬಾನ್,​ 1500 ವರ್ಷಗಳ ಬುದ್ಧನ ಮೂರ್ತಿಗಳನ್ನೂ ನಾಶ ಮಾಡಿತ್ತು.

ಇದನ್ನೂ ಓದಿ: ಕಾಬೂಲ್​ಗೆ ಬಂದ 1 ಸಾವಿರ ​​ಸೈನಿಕರಿಂದ ಇಂಗ್ಲೆಂಡ್​​ ನಾಗರಿಕರ ರಕ್ಷಣೆ

ಅಲ್ಪಸಂಖ್ಯಾತರ ಹತ್ಯಾಕಾಂಡ ಮತ್ತು ಶಿಕ್ಷೆ ಮಿತಿ ಮೀರಿತ್ತು. 2001ರಲ್ಲಿ ಸುಮಾರು 2500 ಅರಬರು ತಾಲಿಬಾನ್​​ಗಾಗಿ ಹೋರಾಡಿದ್ರು. ಉಗ್ರ ಒಸಾಮಾ ಬಿನ್​ ಲಾಡೆನ್​ ನೇತೃತ್ವದಲ್ಲಿ ಹೋರಾಟ ಮಾಡಲಾಗಿತ್ತು. ಒಸಾಮಾ ಬಿನ್ ಲಾಡೆನ್​ ಜೊತೆ ನೇರ ಸಂಪರ್ಕವನ್ನು ತಾಲಿಬಾನ್​ ಹೊಂದಿತ್ತು.

Source: newsfirstlive.com Source link