ಜವಾಹರ್​ಲಾಲ್ ಈ ದೇಶಕ್ಕೆ ನೀಡಿರುವ ಕೊಡುಗೆ ಅಪಾರ..- ಹೆಚ್​.ಡಿ. ಕುಮಾರಸ್ವಾಮಿ

ಜವಾಹರ್​ಲಾಲ್ ಈ ದೇಶಕ್ಕೆ ನೀಡಿರುವ ಕೊಡುಗೆ ಅಪಾರ..- ಹೆಚ್​.ಡಿ. ಕುಮಾರಸ್ವಾಮಿ

ಬೆಂಗಳೂರು: ಮಾಜಿ ಪ್ರಧಾನಿಗಳಾದ ಜವಹಾರ್​ಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ವಾಜಪೇಯಿ ಅವರ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಟೀಕೆ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ. ಹೆಚ್​.ಡಿ. ಕುಮಾರಸ್ವಾಮಿ ಗಣ್ಯರ ವಿರುದ್ಧ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ವೀರ ಸಾವರ್ಕರ್ ಗೊತ್ತಿಲ್ಲದವರಿಗೆ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ: ಸಿ.ಟಿ. ರವಿ

ಸಿ.ಟಿ. ರವಿ ಕಾಂಗ್ರೆಸ್ ನಾಯಕರು ಹೇಳಿದ್ದೆಲ್ಲವನ್ನೂ ಗಮನಿಸಿದ್ದೇನೆ.. ಯಾರ ಬಗ್ಗೆಯಾಗಲೀ ಲಘುವಾಗಿ ಮಾತನಾಡುವುದು ಸೂಕ್ತವಲ್ಲ. ಅವರ ವೈಯಕ್ತಿಕ ಜೀವನ ಬೇರೆ.. ಆದರೆ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಯ ಬಗ್ಗೆ ನಾವು ಹೆಚ್ಚಿನ ಗಮನ ಕೊಡಬೇಕು. ಅದೇ ನಮಗೆ ಮಾರ್ಗದರ್ಶನ ನೀಡುವುದು.

ಇದನ್ನೂ ಓದಿ: ವಾಜಪೇಯಿ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ, ಪ್ರಿಯಾಂಕ್ ಖರ್ಗೆ ಒಬ್ಬ ಬಚ್ಚಾ; ಎಂ.ಪಿ. ರೇಣುಕಾಚಾರ್ಯ

ನೆಹರು ಅವರು ಈ ದೇಶಕ್ಕೆ ಅವರದೇ ಆದ ಕೊಡುಗೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ ತರುವ ಸಂದರ್ಭದಲ್ಲಿ ಬಹುಶಃ ನಮ್ಮ ಹೋರಾಟದ ಸಮಯದಲ್ಲಿ ಅತೀ ಹೆಚ್ಚು ಜೈಲು ವಾಸ ಅನುಭವಿಸಿದಂಥವರು ನೆಹರೂ ಅವ್ರು. ಸ್ವಾತಂತ್ರ್ಯ ಬಂದ ಮೇಲೆ ಹಲವು ಸವಾಲುಗಳಿದ್ದವು. ದೇಶ ವಿಭಜನೆಯಾಗಿ ಪಾಕಿಸ್ತಾನದಿಂದ ದೇಶಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬಂದಿದ್ದರು. ಅವರಿಗ ರಕ್ಷಣೆ ನೀಡುವುದು ಪ್ರಧಾನಮಂತ್ರಿಗಳಿಗೆ ಸವಾಲಾಗಿತ್ತು. ಅದನ್ನ ಎದುರಿಸಿ ದೇಶದ ಕೃಷಿ, ಉದ್ಯೋಗ ವಲಯಕ್ಕೆ ನೀಡಿರುವ ಕೊಡುಗೆಯನ್ನ ಎಂದೂ ಮರೆಯಲಾಗದು. ಹೀಗೆ ಗಣ್ಯರ ಅವಹೇಳನ ಮಾಡಿ ದೇಶಕ್ಕೆ ಅಪಮಾನ ಮಾಡಬೇಡಿ ಎಂದು ಹೆಚ್​ಡಿಕೆ ಕಿಡಿಕಾರಿದ್ದಾರೆ.

Source: newsfirstlive.com Source link