ವಿದ್ಯಾಭ್ಯಾಸ ಮುಗಿಸಿ ಪ್ರವಾಸಕ್ಕೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು

ವಿದ್ಯಾಭ್ಯಾಸ ಮುಗಿಸಿ ಪ್ರವಾಸಕ್ಕೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು

ಉತ್ತರ ಕನ್ನಡ: ಸಮುದ್ರದಲ್ಲಿ ಮುಳುಗಿ, ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ದುರ್ಘಟನೆ ಕುಮಟಾ ತಾಲೂಕಿನ ಬಾಡ ಬೀಚ್​ನಲ್ಲಿ ನಡೆದಿದೆ.

blank

ಮೇಘ ಎಂ ಹಾಗೂ ರೇಣುಕಾ ಪ್ರಸಾದ್ ಮೃತ ವಿದ್ಯಾರ್ಥಿನಿಯರು. ದಾವಣಗೆರೆ ಮೂಲದ ವಿದ್ಯಾರ್ಥಿಗಳಾದ ಇವ್ರು, ಇಂಜಿನಿಯರ್ ವಿದ್ಯಾಭ್ಯಾಸ ಮುಗಿಸಿ ಪ್ರವಾಸಕ್ಕೆ ಸ್ನೇಹಿತರ ಜೊತೆ ಬಂದಿದ್ರು. ಈ ವೇಳೆ, ಇಂಥ ದುರ್ಘಟನೆ ನಡೆದಿದ್ದು, ಮೇಘಾ ಮತ್ತು ರೇಣುಕಾ ಸಾವನ್ನಪ್ಪಿದ್ದಾರೆ. ಸದ್ಯ, ಮೇಘಾ ಮೃತದೇಹ ಸಿಕ್ಕಿದ್ದು, ರೇಣುಕಾ ಪ್ರಸಾದ್ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

blank

Source: newsfirstlive.com Source link