20 ವರ್ಷ, ₹210 ಲಕ್ಷ ಕೋಟಿ ವೆಚ್ಚ ವ್ಯರ್ಥ..?; ತಾಲಿಬಾನ್​ ವಿಚಾರದಲ್ಲಿ ಅಮೆರಿಕ ಸೋಲಿಗೆ ಕಾರಣವೇನು..?

20 ವರ್ಷ, ₹210 ಲಕ್ಷ ಕೋಟಿ ವೆಚ್ಚ ವ್ಯರ್ಥ..?; ತಾಲಿಬಾನ್​ ವಿಚಾರದಲ್ಲಿ ಅಮೆರಿಕ ಸೋಲಿಗೆ ಕಾರಣವೇನು..?

ಸೆಪ್ಟೆಂಬರ್​​ 11, 2001 ಅಮೆರಿಕಾದ ಮೇಲೆ ಅಲ್​ಖೈದಾ ದಾಳಿ ನಡೆಸಿತ್ತು. ಅಮೆರಿಕಾದ ಅಂತಾರಾಷ್ಟ್ರೀಯ ವಾಣಿಜ್ಯ ಕೇಂದ್ರಗಳಾದ ಟ್ವಿನ್ ಟವರ್​​ಗಳ ಮೇಲೆ ಏರೋಪ್ಲೇನ್​ಗಳ ಮೂಲಕ ಅಲ್​ಖೈದಾ ದಾಳಿ ನಡೆಸಿತ್ತು. ದಾಳಿಯಲ್ಲಿ 2,996 ಜನರ ಸಾವನ್ನಪ್ಪಿದ್ದರೆ, 25 ಸಾವಿರಕ್ಕೂ ಅಧಿಕ ಜನರಿಗೆ ಗಾಯವಾಗಿತ್ತು.

ಇದನ್ನೂ ಓದಿ: ಅಮೆರಿಕಾ, ನ್ಯಾಟೋ ಪಡೆಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನ್ ವಶ

ಈ ದಾಳಿ ಬಳಿ ಬದಲಾದ ಪರಿಸ್ಥಿತಿಯಲ್ಲಿ ತಾಲಿಬಾನ್​​ಗೂ ಸಂಚಕಾರ ಎದುರಾಗಿತ್ತು. ಒಸಾಮಾ ಬಿನ್​ ಲಾಡೆನ್​​​ನ ಅಲ್​ಖೈದಾ ವಿರುದ್ಧ ಅಮೆರಿಕಾ ಸಮರ ಸಾರಿತ್ತು. ಅಲ್​ಖೈದಾ ಜೊತೆ ನೇರ ಸಂಪರ್ಕ ಹಿನ್ನೆಲೆ ತಾಲಿಬಾನ್​​​​​ ಮೇಲೆ ಅಮೆರಿಕಾ ದಾಳಿ ನಡೆಸಿತ್ತು. ಸೆ.11 2001ರ ಬಳಿಕ ಅಫ್ಘಾನಿಸ್ತಾನದಲ್ಲಿ ದಾಳಿ ಆರಂಭಿಸಿತ್ತು.

blank

ಕಳೆದ 20 ವರ್ಷದಲ್ಲಿ ಈ ದಾಳಿಗೆ ಅಮೆರಿಕಾ ಬರೋಬ್ಬರಿ ₹210 ಲಕ್ಷ ಕೋಟಿ ವೆಚ್ಚ ಮಾಡಿತ್ತು. ಅಮೆರಿಕಾ ದಾಳಿ ಬಳಿಕ ಸುಮಾರು 2.5 ಲಕ್ಷ ಅಫ್ಘನ್ನರು ಸಾವನ್ನಪ್ಪಿದ್ದರು. ಅಮೆರಿಕಾದ 6,872 ಸೈನಿಕರು ಯುದ್ಧದ ವೇಳೆ ಹುತಾತ್ಮರಾಗಿದ್ದರು. ಇಂಗ್ಲೆಂಡ್​, ಟರ್ಕಿ ಮುಂತಾದ ನ್ಯಾಟೋ ಪಡೆಗಳಿಗೂ ಹಾನಿಯಾಗಿತ್ತು.

ಇದನ್ನೂ ಓದಿ: ಶ್ವೇತಭವನದ ಮುಂದೆ ಅಫ್ಘಾನಿಸ್ತಾನ ಪ್ರಜೆಗಳ ಪ್ರತಿಭಟನೆ; ಸಾವಿರ ಲಾಡೆನ್​ ಹುಟ್ಟುತ್ತಾರೆಂಬ ಆತಂಕ

ಕಳೆದ 20 ವರ್ಷಗಳಿಂದ ನಿರಂತರ ಯುದ್ಧದಲ್ಲಿ ತೊಡಗಿದ್ದ ಅಮೆರಿಕಾ ಅಫ್ಘನ್ ಪಡೆಗಳಿಗೂ ಟ್ರೇನಿಂಗ್ ನೀಡಿತ್ತು. ಅಲ್ಲದೇ ಆಧುನಿಕ ಶಸ್ತ್ರಾಸ್ತ್ರಗಳ ಪೂರೈಕೆ ಮಾಡಿತ್ತು. ಸುಮಾರು 4 ಲಕ್ಷ ಭಾಷಾಂತರಕಾರರನ್ನ USA ಇಟ್ಟುಕೊಂಡಿತ್ತು.

blank

ಹಣ ಖರ್ಚು, ಸಾವು-ನೋವು, ಟ್ರೇನಿಂಗ್​ ಆದ್ರೂ ಹೀಗೇಕಾಯ್ತು?

ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆಯನ್ನ ಹಿಂದಕ್ಕೆ ಕರೆಸಿಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಹಿಂದಿನ ದುಸ್ಥಿತಿ ಮತ್ತೆ ಮರುಕಳಿಸಿದೆ. ಅಮೆರಿಕಾ ಮಾಡಿದ್ದಾದ್ರೂ ಏನು? ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ಇಷ್ಟು ದಿನ ಈ ತಾಲಿಬಾನಿಗಳು ಇದ್ದಿದ್ದು ಎಲ್ಲಿ? ತಾಲಿಬಾನಿಗಳಿಗೆ ಟ್ರೇನಿಂಗ್ ಕೊಟ್ಟಿದ್ದು ಯಾರು? ಉಗ್ರರ ಕೈಗೆ ಶಸ್ತ್ರಾಸ್ತ್ರ ಕೊಟ್ಟಿದ್ದು ಯಾರು? ಎಂಬ ಸಮಸ್ಯೆಯನ್ನೇ ಗುರ್ತಿಸಲು ಅಮೆರಿಕಾ ವಿಫಲವಾಗಿದೆ. ತಾಲಿಬಾನಿಗಳ ಬೆನ್ನೆಲುಬಾದ ಪಾಕಿಸ್ತಾನ ಕಟ್ಟಿ ಹಾಕಲು ಅಮೆರಿಕಾ ವಿಫಲವಾಗಿದೆ. ಅಮೆರಿಕಕ್ಕೆ ಪಾಕಿಸ್ತಾನದ ಐಎಸ್​​ಐ ಸೋಲುಣಿಸಿದೆ.

Source: newsfirstlive.com Source link