ಅಫ್ಘಾನಿಸ್ತಾನದಲ್ಲಿ ಅರಾಜಕತೆ: ಇಂದು ಮಧ್ಯರಾತ್ರಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭಾಷಣ

ಅಫ್ಘಾನಿಸ್ತಾನದಲ್ಲಿ ಅರಾಜಕತೆ: ಇಂದು ಮಧ್ಯರಾತ್ರಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭಾಷಣ

ಅಫ್ಘಾನಿಸ್ತಾನ ಈಗ ತಾಲಿಬಾನಿಗಳ ಕೈವಶವಾಗಿದೆ. ಇಂದು ಅಥವಾ ನಾಳೆ ಅಫ್ಘಾನಿಸ್ತಾನದಲ್ಲಿ ಇಂದು ಅಥವಾ ನಾಳೆ ತಾಲಿಬಾನಿಗಳ ಸರ್ಕಾರ ರಚನೆಯಾಗುವ ಸಾಧ್ಯತೆಯೂ ಇದೆ. ಈ ಬೆನ್ನಲ್ಲೇ ಇದೀಗ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ದೇಶವನ್ನುದ್ದೇಶಿಸಿ ಇಂದು ಮಧ್ಯರಾತ್ರಿ ಸುಮಾರು 1:15 ರ ಸುಮಾರಿಗೆ ಮಾತನಾಡಲಿದ್ದಾರೆ.

ಇದನ್ನೂ ಓದಿ: ಅಮೆರಿಕಾ, ನ್ಯಾಟೋ ಪಡೆಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈಗ ತಾಲಿಬಾನ್ ವಶ

ಅಫ್ಘಾನಿಸ್ತಾನದಲ್ಲಿ ಕಳೆದ 20 ವರ್ಷಗಳಿಂದ ಅಮೆರಿಕಾ ಸೇನೆ ತಾಲಿಬಾನಿಗಳು, ಅಲ್​ಖೈದಾ ಉಗ್ರರ ವಿರುದ್ಧ ಸಮರ ಸಾರಿತ್ತು. ಇದಕ್ಕಾಗಿ ಅಮೆರಿಕಾ ಸರ್ಕಾರ ದೊಡ್ಡ ಮೊತ್ತವನ್ನೂ ಸಹ ವೆಚ್ಚ ಮಾಡಿತ್ತು. ಇತ್ತೀಚೆಗೆ ಜೋ ಬಿಡೆನ್ ಅಮೆರಿಕಾ ಸೇನೆಯನ್ನ ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ತು. ಇದಕ್ಕೇ ಕಾದು ಕೂತಂತಿದ್ದ ತಾಲಿಬಾನಿಗಳು ಅಫ್ಘಾನಿಸ್ತಾನದ ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ತಾ ಹೋಯಿತು. ಹೀಗೆ ಇದೀಗ ಸಂಪೂರ್ಣ ಅಫ್ಘಾನಿಸ್ತಾನವನ್ನ ತಾಲಿಬಾನ್ ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: 20 ವರ್ಷ, ₹210 ಲಕ್ಷ ಕೋಟಿ ವೆಚ್ಚ ವ್ಯರ್ಥ..?; ತಾಲಿಬಾನ್​ ವಿಚಾರದಲ್ಲಿ ಅಮೆರಿಕ ಸೋಲಿಗೆ ಕಾರಣವೇನು..?

ಜಗತ್ತಿನ ಹಲವು ದೇಶಗಳು ಇದೀಗ ಅಫ್ಘಾನಿಸ್ತಾನದ ಈ ಅರಾಜಕತೆಗೆ ಅಮೆರಿಕಾ ಸರ್ಕಾರವೂ ಸಹ ಕಾರಣ ಎಂದು ಹೇಳುತ್ತಿವೆ. ತನ್ನ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ಇದೀಗ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ದೇಶವನ್ನುದ್ದೇಶಿಸಿ ಮಾತನಾಡಲು ಸಮಯ ನಿಗದಿ ಮಾಡಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಸದ್ಯದ ಪರಿಸ್ಥಿತಿ ಬೆನ್ನಲ್ಲೇ ಜಗತ್ತಿನ ದೊಡ್ಡಣ್ಣ ಇದೀಗ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

Source: newsfirstlive.com Source link