ಸತೀಶ್​ ರೆಡ್ಡಿ ಕಾರಿಗೆ ಬೆಂಕಿ: ಆರೋಪಿಗಳಿಗೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಸತೀಶ್​ ರೆಡ್ಡಿ ಕಾರಿಗೆ ಬೆಂಕಿ: ಆರೋಪಿಗಳಿಗೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಮನೆಯ ಬಳಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮೂವರು ಆರೋಪಿಗಳನ್ನ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.

ಹೆಚ್ಚಿನ ವಿಚಾರಣೆಗಾಗಿ, ಸಾಗರ್ ತಾಪ , ಶ್ರೀಧರ್ ಮತ್ತು ನವೀನ್​ರನ್ನ ಬೊಮ್ಮನಹಳ್ಳಿ ಪೊಲೀಸ್ರು ಕಸ್ಟಡಿಗೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ. ಆರೋಪಿಗಳನ್ನ ಶನಿವಾರ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿತ್ತು. ಇಂದು ಬಾಡಿ ವಾರೆಂಟ್ ಮೇಲೆ ಬೊಮ್ಮನಹಳ್ಳಿ ಪೊಲೀಸ್ರು ತಮ್ಮ ಕಸ್ಟಡಿಗೆ ಪಡೆದು ವಿಚಾರಣೆ ಶುರುಮಾಡಿದ್ದಾರೆ.

Source: newsfirstlive.com Source link