ಶಂಕುಸ್ಥಾಪನೆಗೆ ತೆರಳಿದ್ದ ಹೆಚ್​ಡಿಕೆ ಮುಂದೆ ಮಹಿಳೆಯರ ಹೈಡ್ರಾಮಾ.. ನಡೆದಿದ್ದೇನು..?

ಶಂಕುಸ್ಥಾಪನೆಗೆ ತೆರಳಿದ್ದ ಹೆಚ್​ಡಿಕೆ ಮುಂದೆ ಮಹಿಳೆಯರ ಹೈಡ್ರಾಮಾ.. ನಡೆದಿದ್ದೇನು..?

ರಾಮನಗರ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣ ವಾಗುತ್ತಿರುವ ಮನೆಗಳಿಗೆ ಶಂಕುಸ್ಥಾಪನೆಗೆ ಬಂದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮುಂದೆ ಮಹಿಳೆಯರು ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.

ಮನೆ ನಿರ್ಮಾಣ ಮಾಡುವುದಕ್ಕು ಈ ಕುಟುಂಬ ಜಮೀನು ಬರೆದುಕೊಟ್ಟಿತ್ತು ಎನ್ನಲಾಗಿದೆ. ಇಂದು ಶಂಕು ಸ್ಥಾಪನೆಗೆ ಹೆಚ್​ಡಿಕೆ ಬಂದಿದ್ದ ವೇಳೆ ಇಬ್ಬರು ಮಹಿಳೆಯ ಹೈ ಡ್ರಾಮಾ ಮಾಡಿ ನಮಗೆ ಸರಿಯಾದ ಪರಿಹಾರ ಕೊಡಬೇಕು ಎಂದು ಕೂಗಾಡಿದ್ದಾರೆ.

ಇದನ್ನೂ ಓದಿ: ಜವಾಹರ್​ಲಾಲ್ ಈ ದೇಶಕ್ಕೆ ನೀಡಿರುವ ಕೊಡುಗೆ ಅಪಾರ..- ಹೆಚ್​.ಡಿ. ಕುಮಾರಸ್ವಾಮಿ

ಸರಿಯಾದ ರೀತಿಯಲ್ಲಿ ನಡೆದುಕೊಂಡರೇ ನ್ಯಾಯ ಕೊಡಿಸುತ್ತೇನೆ.. ಟಿವಿಗಳ ಮುಂದೆ ಕೂಗಾಡಿ ನಾಟಕ ಮಾಡಬೇಡಿ ಎಂದು ಹೆಚ್.ಡಿ.ಕೆ‌ ಗರಂ ಆಗಿದ್ದಾರೆ. ನಿಮ್ಮ ತಂದೆ ಜಮೀನನ್ನ ಬರೆದುಕೊಟ್ಟಾಗ ನೀವು ಎಲ್ಲಿ ಹೋಗಿದ್ರಿ ಅಂತಾ ಮಹೆಳೆಯರಿಗೆ ಪ್ರಶ್ನೆ ಮಾಡಿದ್ದಾರೆ. ರಾಮನಗರದ ಕೊತ್ತಿಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಆಯೋಜಿಸಿದ್ದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

Source: newsfirstlive.com Source link