ಅಫ್ಘಾನ್ ಅರಾಜಕತೆ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆ; ಭಾರತದ ರಾಯಭಾರಿ ಹೇಳಿದ್ದೇನು..?

ಅಫ್ಘಾನ್ ಅರಾಜಕತೆ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆ; ಭಾರತದ ರಾಯಭಾರಿ ಹೇಳಿದ್ದೇನು..?

ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇಂದು ತುರ್ತು ಸಭೆ ಕರೆದಿತ್ತು. ಈ ವೇಳೆ ಮಾತನಾಡಿದ UNSC ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್.. ತಾಲಿಬಾನಿಗಳು​ ತಾವು ಕೊಟ್ಟ ವಚನ ಮರೆತಿದ್ದಾರೆ. ಸಾವಿರಾರು ಕುಟುಂಬಗಳು ಈಗಾಗಲೇ ಬೀದಿಗೆ ಬಿದ್ದಿವೆ.. ತಾಲಿಬಾನಿಗಳು ಸಂಯಮದಿಂದ ಇರಬೇಕೆಂದು ಕರೆ ನೀಡಿದ್ದಾರೆ.

blank

ಅಲ್ಲದೇ.. ಅಫ್ಘಾ​ನ್​ನಲ್ಲಿ ಕರಾಳ ದಿನಗಳು ಮರುಕಳಿಸುವ ಭೀತಿ ಎದುರಾಗಿದೆ. ಅಫ್ಘಾನ್​ನಲ್ಲಿ ಮಾನವ ಹಕ್ಕುಗಳನ್ನು ಎತ್ತಿಹಿಡಿಯಬೇಕಿದೆ. ಅಂತಾರಾಷ್ಟ್ರೀಯ ಸಮುದಾಯ ಈ ಬಗ್ಗೆ ಮಾತಾಡಬೇಕು. ನಾವೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡಬೇಕು. ವ್ಯಕ್ತಿಗಳ ಸ್ವಾತಂತ್ರ್ಯ, ಹಕ್ಕು ರಕ್ಷಿಸಲು ತಾಲಿಬಾನಿಗಳಿಗೆ ಮನವಿ ಮಾಡಿದ್ದಾರೆ.

blank

ಅಮೆರಿಕಾ​ ರಾಯಭಾರಿ ಲಿಂಡಾ ಥಾಮಸ್​ ಮಾತನಾಡಿ.. US ​ನಲ್ಲಿ ಅಫ್ಘಾನ್​ ಪ್ರಜೆಗಳಿಗೆ ಪುನರ್ವಸತಿಯ ಭರವಸೆ ನೀಡುತ್ತಿದ್ದೇವೆ. ಇತರೆ ರಾಷ್ಟ್ರಗಳು ಕೂಡ ಪುನರ್ವಸತಿ ಭರವಸೆ ನೀಡಿವೆ. ಅಫ್ಘಾನ್​ ನೆರೆಹೊರೆಯವರು ಜನರಿಗೆ ಆಶ್ರಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.

blank

ಇನ್ನು ಭಾರತದ ರಾಯಭಾರಿ ಟಿ.ಎಸ್​. ತಿರುಮೂರ್ತಿ ಹೇಳಿಕೆ ನೀಡಿ.. ತಾಲಿಬಾನಿಗಳು ನೆರೆ ದೇಶಗಳನ್ನು ಆಕ್ರಮಿಸಬಾರದು. ಈ ಬಗ್ಗೆ ನಾವು ಖಾತ್ರಿಪಡಿಸಿಕೊಂಡರೆ ಮಾತ್ರ ಸುರಕ್ಷಿತ ಎಂದಿದ್ದಾರೆ. ಕಾಬೂಲ್​ ಏರ್​ಪೋರ್ಟ್​ ದುರ್ಘಟನೆ ದುರದೃಷ್ಟಕರ. ಜನರಲ್ಲಿ ವ್ಯಾಪಕವಾದ ಭೀತಿಯನ್ನು ಉಂಟುಮಾಡಿದೆ. ಅಫ್ಘಾನ್ ಮಹಿಳೆಯರು, ಮಕ್ಕಳು ಸಂಕಷ್ಟದಲ್ಲಿದ್ದಾರೆ. ಏರ್​ಪೋರ್ಟ್​ನಲ್ಲಿ ಗುಂಡು ಹಾರಿಸಿದ ಘಟನೆ ವರದಿಯಾಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

Source: newsfirstlive.com Source link