ಬೈಕ್ ಸವಾರನ ಹುಡುಗಾಟದಿಂದ ಪ್ರಯಾಣಿಕರು ತುಂಬಿದ್ದ ಬಸ್​ ಪಲ್ಟಿ

ಬೈಕ್ ಸವಾರನ ಹುಡುಗಾಟದಿಂದ ಪ್ರಯಾಣಿಕರು ತುಂಬಿದ್ದ ಬಸ್​ ಪಲ್ಟಿ

ಗದಗ: ಬೈಕ್ ಸವಾರನ ಬೇಜವಾಬ್ಧಾರಿತನದಿಂದ ಹಿಂದೆ ಬರುತ್ತಿದ್ದ, ಪ್ರಯಾಣಿಕರಿಂದ ತುಂಬಿ ತುಳುಕಿದ್ದ ಸರಕಾರಿ ಬಸ್, ಗುಂಡಿಗೆ ಉರುಳಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪುರ ಬಳಿ ನಡೆದಿದೆ.

ಗದಗದಿಂದ ಮುಂಡರಗಿ ಕಡೆ ಹೋಗುತ್ತಿದ್ದ ಬಸ್​ ಈ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಬಿದ್ದಿರೋ ಬಸ್​ನಿಂದ ಪ್ರಯಾಣಿಕರು ಭಯದಿಂದ ಹೊರಬಂದಿದ್ದಾರೆ.

 

Source: newsfirstlive.com Source link