ಎಲ್ಲಿ ಸ್ಪರ್ಧೆ ಇದೆಯೋ ಅಲ್ಲಿ ಪಕ್ಷ ಬೆಳೆದಿದೆ ಅಂತಾ ಅರ್ಥ: ಕಟೀಲ್

ಧಾರವಾಡ: ಎಲ್ಲಿ ಸ್ಪರ್ಧೆ ಇದೆಯೋ ಅಲ್ಲಿ ಪಕ್ಷ ಬೆಳೆದಿದೆ ಅಂತಾ ಅರ್ಥ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಬಿಜೆಪಿ ಟಿಕೆಟ್‍ಗಾಗಿ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಹೆಚ್ಚಿರುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಮಾತನಾಡಿದ್ದು, ಎಲ್ಲಿ ಸ್ಪರ್ಧೆ ಇದೆಯೋ ಅಲ್ಲಿ ಪಕ್ಷ ಬೆಳೆದಿದೆ ಅಂತಾ ಅರ್ಥ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್

ಧಾರವಾಡದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪಕ್ಷ ಬಹಳ ಗಟ್ಟಿಯಾಗಿದೆ. ಈ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ ನೆರವು

ಆಕಾಂಕ್ಷಿಗಳಿಗೆ ಸ್ಥಾನ ಸಿಗದಾಗ ನೋವು ಆಗೋದು ಸಹಜವಾಗಿದೆ. ಪಕ್ಷದ ಸಿಟ್ ಸಿಗದೇ ಇದ್ದಾಗ ನೋವು ಮರೆತು ಪಕ್ಷದ ಕೆಲಸ ಮಾಡುವ ಕಾರ್ಯಕರ್ತರು ನಮ್ಮಲ್ಲಿದಾರೆ. ವಾರ್ಡ್‍ವೊಂದಕ್ಕೆ ಕನಿಷ್ಟ ಹತ್ತು ಜನರಾದರೂ ಆಕಾಂಕ್ಷಿಗಳಿರಬೇಕೆಂಬ ಅಪೇಕ್ಷೆ ನಮಗಿದೆ ಎಂದರು.

Source: publictv.in Source link