ಭಾರತ-ಇಂಗ್ಲೆಂಡ್ 2ನೇ ಟೆಸ್ಟ್:​ ಟೀಮ್ ಇಂಡಿಯಾಗೆ ರೋಚಕ ಗೆಲುವು

ಭಾರತ-ಇಂಗ್ಲೆಂಡ್ 2ನೇ ಟೆಸ್ಟ್:​ ಟೀಮ್ ಇಂಡಿಯಾಗೆ ರೋಚಕ ಗೆಲುವು

ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ದಾಖಲಿಸಿದೆ. ಲಾರ್ಡ್ಸ್​ ಮೈದಾನದಲ್ಲಿ ಭಾರತಕ್ಕೆ ಭರ್ಜರಿ ಜಯ ಸಿಕ್ಕಿದ್ದು 2ನೇ ಟೆಸ್ಟ್​ನಲ್ಲಿ 151 ರನ್​ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ.

ಟೀಮ್​ ಇಂಡಿಯಾ ಇಂಗ್ಲೆಂಡ್​ಗೆ 272 ರನ್​ಗಳ ಟಾರ್ಗೆಟ್​ ನೀಡಿತ್ತು.. 120 ರನ್​ಗಳಿಗೆ ಆತಿಥೇಯ ಇಂಗ್ಲೆಂಡ್​ ಆಲೌಟ್​​ ಆಗಿದೆ. ಭಾರತದ ಪರ ಸಿರಾಜ್​ಗೆ 4, ಬೂಮ್ರಾಗೆ 3 ವಿಕೆಟ್​​​​ ಪಡೆದುಕೊಂಡ್ರೆ ಮೊಹಮ್ಮದ್​​ ಶಮಿಗೆ 1, ಇಶಾಂ​ತ್​​​ಗೆ 2​ ವಿಕೆಟ್​​​ ಲಭಿಸಿದೆ.

ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 364 ರನ್ ಗಳಿಸಿ ಆಲ್​ಔಟ್ ಆಗಿತ್ತು ಸೆಕೆಂಡ್ ಇನ್ನಿಂಗ್ಸ್​ನಲ್ಲಿ 8 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ​ 391 ರನ್​ ಗಳಿಸಿ ಆಲೌಟ್​ ಆಗಿತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 120 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಇಂಗ್ಲೆಂಡ್ ಸೋಲೊಪ್ಪಿಕೊಂಡಿದೆ.

Source: newsfirstlive.com Source link