ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್

ನವದೆಹಲಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುತೂಹಲ ಹುಟ್ಟಿಸಿದ್ದಾರೆ.

ನಾನು ನಾಳೆ (ಆಗಸ್ಟ್ 17) ಉತ್ತರಾಖಂಡಕ್ಕೆ ತೆರಳುತ್ತಿದ್ದೇನೆ. ನಮ್ಮ ಆಮ್ ಆದ್ಮಿ ಪಕ್ಷದಿಂದ ಬಹುಮುಖ್ಯವಾದ ಘೋಷಣೆಯೊಂದನ್ನು ರಾಜ್ಯದ ಜನರಿಗಾಗಿ ಮಾಡಲಿದ್ದೇವೆ. ನಾವು ಮಾಡುವ ಆ ಘೋಷಣೆ ಉತ್ತರಾಖಂಡ್‍ನ ಅಭಿವೃದ್ಧಿ, ಬೆಳವಣಿಗೆಯ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಿಂದ ಭಾರತೀಯರ ಕರೆತರಲು ಕಸರತ್ತು

ಉತ್ತರಾಖಂಡ್‍ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿ ಗೆಲುವಿಗೆ ಬೇಕಾದ ಸಿದ್ಧತೆಗಳನ್ನು ಆಮ್ ಆದ್ಮಿ ಪಕ್ಷ ಈಗಿನಿಂದಲೇ ಶುರು ಮಾಡಿಕೊಂಡಿದೆ. ನಾವು ಉತ್ತರಾಖಂಡ್‍ನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಮತ್ತು ಇಲ್ಲಿನ ಅಭಿವೃದ್ಧಿ ಸಂಬಂಧಿತ ಕುಂದು, ಕೊರತೆಗಳ ಬಗ್ಗೆ ನಮ್ಮ ಚುನಾವಣಾ ಪ್ರಚಾರದಲ್ಲಿ ಎತ್ತಿ ಹಿಡಿಯುತ್ತೇವೆ ಎಂದು ಆಮ್ ಆದ್ಮಿ ಪಕ್ಷ ಹೇಳಿಕೊಂಡಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ ನೆರವು

ನಾವು ಉತ್ತರಾಖಂಡ ರಾಜ್ಯದ ಜನರಿಗಾಗಿ ಒಂದು ಬಹುದೊಡ್ಡ ಘೋಷಣೆಯನ್ನು ಮಾಡಲಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿರುವುದು ಜನರಲ್ಲಿ ಕುತೂಹಲ ಹುಟ್ಟಿಸಿದೆ.

Source: publictv.in Source link