ಅಫ್ಘಾನಿಸ್ತಾನ್​​​ನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಯಾಕೆ?

ಅಫ್ಘಾನಿಸ್ತಾನ್​​​ನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಯಾಕೆ?

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಇಡೀ ದೇಶದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಮತ್ತೆ 20 ವರ್ಷ ಹಿಂದಿನಂತೆ ತಾಲಿಬಾನ್ ಅಧಿಕಾರ ಹಿಡಿಯಲು ಮುಂದಾಗಿದೆ. ಚುನಾಯಿತ ಸರ್ಕಾರವನ್ನೇ ತಾಲಿಬಾನ್ ಕಿತ್ತೊಗೆದಿದೆ. ​ಇದರಿಂದ ಅಫ್ಘಾನಿಸ್ತಾನದಲ್ಲಿ ಅಮೆರಿಕಾ ದೊಡ್ಡ ಸೋಲು ಕಂಡಂತಾಗಿದೆ.

ಹಾಗಿದ್ರೆ ಅಫ್ಘಾನಿಸ್ತಾನ್​​​ನಲ್ಲಿ ಅರಾಜಕತೆ ಮೂಡಿದ್ದು ಯಾಕೆ?
ತಾಲಿಬಾನಿ ಉಗ್ರರು ಇಷ್ಟು ತ್ವರಿತವಾಗಿ ಕಾಬುಲ್​​ ಗೆದ್ದಿದ್ದು ಹೇಗೆ?

ಅಮೆರಿಕಾ ಮಾಡಿದ ಯಡವಟ್ಟು, ಪಾಕಿಸ್ತಾನದ ಹುನ್ನಾರ.. ಅಫ್ಘಾನಿಸ್ತಾನ ಜನ ಸಾಮಾನ್ಯರಿಗೆ ಪೆಟ್ಟು ಕೊಟ್ಟ ನೀತಿಗಳು ಇಂದಿನ ಅಫ್ಘಾನಿಸ್ತಾನ್​​​ನಲ್ಲಿ ಅರಾಜಕತೆಗೆ ಕಾರಣ ಎನ್ನಲಾಗ್ತಿದೆ. ತಾಲಿಬಾನಿಗಳೊಂದಿಗೆ ಮಾತುಕತೆಗೂ ಮೊದಲೇ ಅಫ್ಘಾನಿಸ್ತಾನದಿಂದ ಹಿಂದೆ ಬರೋದಾಗಿ ಅಮೆರಿಕಾ ಘೋಷಣೆ ಮಾಡಿತ್ತು. ಈ ಮೂಲಕ ತಾಲಿಬಾನಿಗಳಿಗೆ ಪರೋಕ್ಷ ಆಹ್ವಾನ ನೀಡಿದಂತಾಗಿತ್ತು.

blank

ಅಫ್ಘಾನಿಸ್ತಾನದಲ್ಲಿ ಬಾಂಬ್​ ಸ್ಫೋಟ ಮುಂದುವರೆದ್ರೂ ಮಾತುಕತೆ ನಡೆದಿತ್ತು. ಶಾಂತಿಗೆ ಒಪ್ಪದ ತಾಲಿಬಾನಿಗಳ ಜೊತೆ ನಿರಂತರ ಚರ್ಚೆ ನಡೆಯುತ್ತಲೇ ಇತ್ತು. ಸರಿಯಾದ ಒಪ್ಪಂದ ಆಗುವ ಮೊದಲೇ ಅಮೆರಿಕಾ ಅಫ್ಘಾನಿಸ್ತಾನದಿಂದ ಕಾಲ್ಕಿತ್ತಿತ್ತು. ಇನ್ನು ಅಮೆರಿಕಾ ಗುಪ್ತಚರ ಇಲಾಖೆಯೂ ಸಹ ಸಂಪೂರ್ಣ ವಿಫಲವಾದದ್ದರಿಂದ ತಾಲಿಬಾನ್​ ಬಲವನ್ನ ಗುರ್ತಿಸುವಲ್ಲಿ ಅಮೆರಿಕಾ ವಿಫಲಗೊಂಡಿತ್ತು. ಪಾಕಿಸ್ತಾನದ ಬೆಂಬಲ ತಾಲಿಬಾನ್​​ಗೆ ಇದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.

blank

ತಾಲಿಬಾನ್​ ಒಂದು ಸಂಘಟನೆ ಅನ್ನೋದಕ್ಕಿಂತ ಅದು ಮನಸ್ಥಿತಿ ಅಂತಾ ಅರಿಯಲು ನ್ಯಾಟೋ ಸಹ ಸಂಪೂರ್ಣ ವಿಫಲವಾಗಿತ್ತು. ಮಾಹಿತಿ ಕೊರತೆ, ಸಮಸ್ಯೆ ಗುರ್ತಿಸಲೂ ಅಮೆರಿಕಾ ವಿಫಲವಾಗಿತ್ತು. ಇದೆಲ್ಲದರ ಪರಿಣಾಮ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎನ್ನಲಾಗಿದೆ. ಜೀವ ಉಳಿಸಿಕೊಳ್ಳಲು ತಾಲಿಬಾನ್​ ವಿರೋಧಿಗಳು ಹರಸಾಹಸ ಪಡುತ್ತಿದ್ದಾರೆ. ದೇಶ ಬಿಟ್ಟು ಓಡಿಹೋಗಲು ಸಾವಿರಾರು ಜನ ಯತ್ನಿಸುತ್ತಿದ್ದಾರೆ.

Source: newsfirstlive.com Source link