ಅಫ್ಘಾನಿಸ್ತಾನ ಅಂತರಿಕ ವಿಚಾರಕ್ಕೂ ನಮ್ಗೂ ಸಂಬಂಧವಿಲ್ಲ -ಅಫ್ಘನ್​ ಸೇನೆ ವಿರುದ್ಧವೇ ಜೋ ಬೈಡೆನ್ ಕಿಡಿ

ಅಫ್ಘಾನಿಸ್ತಾನ ಅಂತರಿಕ ವಿಚಾರಕ್ಕೂ ನಮ್ಗೂ ಸಂಬಂಧವಿಲ್ಲ -ಅಫ್ಘನ್​ ಸೇನೆ ವಿರುದ್ಧವೇ ಜೋ ಬೈಡೆನ್ ಕಿಡಿ

ಅಫ್ಘಾನಿಸ್ತಾನ ತಾಲಿಬಾನಿ ಉಗ್ರರ ಕೈವಶವಾಗಿದೆ. ಈಗಾಗಲೇ ಅಧ್ಯಕ್ಷರ ಭವನವನ್ನು ಕಬ್ಜಾ ಮಾಡಿರುವ ತಾಲಿಬಾನ್​ ಉಗ್ರರು ಶಾಸನ ನಡೆಸೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೆ ಅಮೆರಿಕ ವಿರುದ್ಧ ಕೇಳಿ ಬಂದ ವ್ಯಾಪಕ ಟೀಕೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಪ್ರತಿಕ್ರಿಯಿಸಿದ್ದಾರೆ.

2 ದಶಕಗಳ ಹಿಂದಿನ ಆ ಕರಾಳ ಇತಿಹಾಸ, ರಕ್ತ ಚರಿತ್ರೆ, ಭೀಕರ ನರಕಸದೃಶ ಅಧ್ಯಾಯದ ಪುಟಗಳು ಗಾಂಧಾರ ಅರ್ಥಾತ್​ ಅಫ್ಘಾನಿಸ್ತಾನದಲ್ಲಿ ಮತ್ತೆ ಒಂದೊಂದಾಗಿ ತೆರೆದುಕೊಳ್ತಿವೆ. ಪಷ್ತೂನರ ನಾಡಿನಲ್ಲಿ ಮತ್ತೆ ತಾಲಿಬಾನಿಗಳು ಪಾರುಪತ್ಯ ಸಾಧಿಸಿದ್ದು ಆ ಘೋರ ದಿನಗಳಿಗೆ ಅಫ್ಘಾನಿಸ್ತಾನದ ಪ್ರಜೆಗಳು ಸಾಕ್ಷಿಯಾಗಿದ್ದಾರೆ. ಇದಕ್ಕೆ ನಿನ್ನೆ ಕಾಬೂಲ್​ ವಿಮಾನ ನಿಲ್ದಾಣದಲ್ಲಿನ ಭಯಾನಕ ದೃಶ್ಯವೇ ಸಾಕ್ಷಿ.

blank

ಇದನ್ನೂ ಓದಿ: ಅಫ್ಘಾನಿಸ್ತಾನ್​​​ನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಯಾಕೆ? 

ಅತ್ತ ಅಫ್ಘಾನಿಸ್ತಾನವನ್ನು ತಾಲಿಬಾನಿ ಉಗ್ರರು ಕೈವಶ ಮಾಡಿಕೊಳ್ತಿದ್ದಂತೆ ಇತ್ತ ಅಮೆರಿಕ ವಿರುದ್ಧ ವಿಶ್ವದ ನಾನಾ ಗಣ್ಯರು ಮುರಕೊಂಡು ಬಿದ್ದಿದ್ದಾರೆ. ಅಫ್ಘಾನಿಸ್ತಾನದ ಈ ಪರಿಸ್ಥಿತಿಗೆ ಅಮೆರಿಕವೇ ಕಾರಣ ಅಂತ ಕಿಡಿಕಾರಿದ್ದಾರೆ. ಇದಕ್ಕೆಲ್ಲ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಉತ್ತರ ಕೊಟ್ಟಿದ್ದಾರೆ.

ಅಮೆರಿಕ ಸೇನೆಯನ್ನು ಹಿಂತೆಗೆದುಕೊಂಡಿದ್ದಕ್ಕೆ ಯಾವುದೇ ಬೇಸರವಿಲ್ಲ
ಅಮೆರಿಕ ಸೇನೆಯನ್ನು ಹಿಂತೆಗೆದುಕೊಂಡಿದ್ದಕ್ಕೆ ಯಾವುದೇ ಬೇಸರವಿಲ್ಲ. ಅಫ್ಘಾನಿಸ್ತಾನ ಮರುನಿರ್ಮಾಣ ಮಾಡೋದು ನಮ್ಮ ನಿರ್ಧಾರವಲ್ಲ. ಅಲ್ಲಿನ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಲ್​ಖೈದಾವನ್ನು ದುರ್ಬಲಗೊಳಿಸಿದ್ದೇವೆ. ಈಗಾಗಲೇ ಉಗ್ರರ ವಿರುದ್ಧದ ಹೋರಾಟಕ್ಕೆ ಅಮೆರಿಕ 1 ಲಕ್ಷ ಕೋಟಿ ಡಾಲರ್​ ಖರ್ಚು ಮಾಡಿದೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

blank

ಅಫ್ಘಾನಿಸ್ತಾನ ಮರು ನಿರ್ಮಾಣ ಮಾಡೋದು ನಮ್ಮ ಕರ್ತವ್ಯವಲ್ಲ

ನಮ್ಮ ಉದ್ದೇಶ ಯಾವತ್ತೂ ಅಫ್ಘಾನಿಸ್ತಾನದ ಮರು ನಿರ್ಮಾಣವಾಗಿರಲಿಲ್ಲ. ಅಥವಾ ಕೇಂದ್ರಿಕೃತ ಪ್ರಜಾಪ್ರಭುತ್ವ ದೇಶವನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ನಮ್ಮ ಉದ್ದೇಶ ಒಂದೇ ಅದು ಅಮೆರಿಕದ ಮೇಲೆ ಉಗ್ರರು ದಾಳಿ ಮಾಡುವುದನ್ನು ತಡೆಯುವುದಾಗಿತ್ತು.
ಜೋ ಬೈಡೆನ್​, ಅಮೆರಿಕ ಅಧ್ಯಕ್ಷ

ಇದನ್ನೂ ಓದಿ: ಅಫ್ಘಾನ್ ಅರಾಜಕತೆ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆ; ಭಾರತದ ರಾಯಭಾರಿ ಹೇಳಿದ್ದೇನು..?

ಅಫ್ಘನ್​ ಸೇನೆ ನಂಬಿ ಅಮೆರಿಕದ ಜೀವಗಳನ್ನು ಬಲಿ ಕೊಡಲ್ಲ
ನಮ್ಮಿಂದ ಅಫ್ಘಾನಿಸ್ತಾನದಲ್ಲಿ ಬದಲಾವಣೆ ತರಲಾಗುತ್ತಿಲ್ಲ. ಅಫ್ಘಾನಿಸ್ತಾನ ತನ್ನ ಸೇನೆಯನ್ನು ಬಲಪಡಿಸಿಕೊಳ್ಳಬೇಕು. ಅಫ್ಘಾನಿಸ್ತಾನ ಸೇನೆ ಉಗ್ರರ ವಿರುದ್ದ ಹೋರಾಡ್ತಿಲ್ಲ. ಹೀಗೆ ಆದ್ರೆ ಅಮೆರಿಕ ಹೋರಾಡುವುದು ವ್ಯರ್ಥ, 20 ವರ್ಷ ಹೋರಾಡಿದ್ರೂ ಬದಲಾವಣೆಯಾಗಲ್ಲ. ಹೀಗಾಗಿ ಅಫ್ಘನ್​ ಸೇನೆಯನ್ನ ನಂಬಿ ಅಮೆರಿಕದ ಜೀವಗಳನ್ನು ಬಲಿ ಕೊಡಲ್ಲ. ಅಫ್ಘಾನಿಸ್ತಾನ ಅಂತರಿಕ ವಿಚಾರಕ್ಕೂ ನಮಗೂ ಸಂಬಂಧವಿಲ್ಲ. ಈ ವಿಚಾರದಲ್ಲಿ ಹಿಂದಿನ ಅಧ್ಯಕ್ಷರು ಮಾಡಿದ ತಪ್ಪನ್ನೇ ಮಾಡಿ, ಅಮೆರಿಕ ಜನರನ್ನು ತಪ್ಪು ದಾರಿಗೆ ಹೇಳುವುದು ಇಷ್ಟವಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಅಂತ ಬೈಡೆನ್​ ಅಫ್ಘನ್​ ಸೇನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

blank

ಇನ್ನು ಈಗಷ್ಟೆ ನೆಲೆ ಕಂಡುಕೊಂಡ ಅಫ್ಘನ್ ಮಹಿಳಾ ಫುಟ್​ಬಾಲ್​ ಆಟಗಾರರು ತಮ್ಮ ಮುಂದಿನ ಸ್ಥಿತಿ ಬಗ್ಗೆ ಕಣ್ಣೀರಿಟ್ಟಿದ್ದಾರೆ. ಇಷ್ಟು ದಿನ ಮಹಿಳಾ ಸಬಲಿಕರಣಕ್ಕಾಗಿ ಹೋರಾಡಿ ಅಂತ ಕರೆ ಕೊಡುತ್ತಿದ್ದ ನಾನು ಈಗ ಅವರಿಗೆ ಬಚ್ಚಿಟ್ಟುಕೊಳ್ಳಿ ಅಂತ ಹೇಳಲು ದುಃಖವಾಗುತ್ತಿದೆ ಅಂತ ಮಹಿಳಾ ಶಕ್ತಿ ಸಂಸ್ಥೆಯ ಮುಖ್ಯಸ್ಥೆ ಹಾಗೂ ಮಹಿಳಾ ಫುಟ್​ವಾಲ್​ ಆಟಗಾರ್ತಿ ಖಲೀಡಾ ಪೋಪಲ್​ ನೋವು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂತೆಗೆದುಕೊಂಡಿದ್ದನ್ನ ಅಮೆರಿಕ ಸಮರ್ಥಿಸಿಕೊಳ್ಳುವ ಜೊತೆಗೆ ಅಮೆರಿಕ ಪ್ರಜೆಗಳ ಮೇಲೆ ಹಲ್ಲೆ ಮಾಡಿದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ತಾಲಿಬಾನಿಗಳಿಗೆ ಎಚ್ಚರಿಕೆಯನ್ನೂ ಕೊಟ್ಟಿದೆ. ಹೀಗಾಗಿ ಇನ್ನೇನಿದ್ರೂ ಅಫ್ಘಾನಿಸ್ತಾನ ತಾಲಿಬಾನಿ ಉಗ್ರರ ಪಾರುಪತ್ಯಕ್ಕೆ ನಲುಗಲಿದೆ. ಒಂದ್ವೇಳೆ ಅಂತರಾಷ್ಟ್ರೀಯ ಶಕ್ತಿಗಳು ಮಧ್ಯಪ್ರವೇಶಿಸಿದ್ರೆ ಪರಿಸ್ಥಿತಿ ಬದಲಾಗಬಹುದು. ಆದ್ರೆ ಅದು ಸುಲಭವಿಲ್ಲ.

ಇದನ್ನೂ ಓದಿ: ತಾಲಿಬಾನಿಗಳು ಅಂದ್ರೆ ಏನು?; ತಾಲಿಬಾನ್​​ ಮುಖ್ಯಸ್ಥ ಅಬ್ದುಲ್ ಗನಿ ಯಾರು..?

ಇದನ್ನೂ ಓದಿ: ಜನರಲ್ ಅಬ್ದುಲ್ ರಶೀದ್ ಮನೆಗೆ ತಾಲಿಬಾನಿಗಳ ದಾಳಿ- ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಅಟ್ಟಹಾಸ

Source: newsfirstlive.com Source link