ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ಗಣಿಗಾರಿಕೆ ಅಬ್ಬರ -ಜಿಲ್ಲಾಡಳಿತ ಜಾಣಮೌನ ವಿರುದ್ಧ ಜನ ಆಕ್ರೋಶ

ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ಗಣಿಗಾರಿಕೆ ಅಬ್ಬರ -ಜಿಲ್ಲಾಡಳಿತ ಜಾಣಮೌನ ವಿರುದ್ಧ ಜನ ಆಕ್ರೋಶ

ಗದಗ: ಕಪ್ಪತ್ತಗುಡ್ಡ ಸೆರಗಿನಲ್ಲಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿದೆ. ಅರಣ್ಯ ಸಂಪತ್ತು ಹಾಳಾಗ್ತಾಯಿದ್ರೂ ಜಿಲ್ಲಾಡಳಿತ ಮಾತ್ರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿಲ್ಲ. ಜಿಲ್ಲಾಡಳಿತ ಗಣಿ ಕುಳಗಳ ಪರ ಮೃದು ಧೋರಣೆ ತೋರುತ್ತಿದೆ ಅಂತ ಜಿಲ್ಲೆ ಜನ್ರು ಕಿಡಿಕಾರಿದ್ದಾರೆ.

ದೇಶದಲ್ಲೇ ಶುದ್ಧ ಗಾಳಿಗೆ ಗದಗ ಜಿಲ್ಲೆ ಹೆಸರಾಗಿದೆ. ಇದಕ್ಕೆ ಕಾರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಕಪ್ಪತ್ತಗುಡ್ಡ. ಆದ್ರೆ, ಈ ಕಪ್ಪತ್ತಗುಡ್ಡ ತನ್ನೊಡಲಿನಲ್ಲಿ ಪಂಚಖನಿಜ ಸಂಪತ್ತನ್ನೇ ಇಟ್ಟುಕೊಂಡಿದೆ. ಹೀಗಾಗಿ ಗಣಿ ಕುಳಗಳ ವಕೃದೃಷ್ಠಿ ಈ ಗುಡ್ಡದ ಮೇಲಿದೆ.
ಹೌದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿದೆ. ಎಂಟು ಕಲ್ಲಿನ ಕ್ವಾರಿಗಳು ತಕ್ಷಣ ಬಂದ್ ಮಾಡುವಂತೆ ಗಣಿ ಇಲಾಖೆ ನೋಟಿಸ್ ನೀಡಿತ್ತು. ಹೀಗಾಗಿ ಗಣಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ರು. ಕೋರ್ಟ್ ಕೂಡಾ ಗಣಿ ಇಲಾಖೆ ನೀಡಿದ ನೋಟಿಸ್ ರದ್ದು ಮಾಡಿ ಆದೇಶ ಮಾಡಿದೆ..

blank

ಆದ್ರೆ, ಈಗ ಕಪ್ಪತ್ತಗುಡ್ಡ ಒಂದು ಕಿಲೋಮೀಟರ್ ವ್ಯಾಪ್ತಿಯ ಕಲ್ಲಿನ ಕ್ವಾರಿ ಮಾಲೀಕರಿಗೆ ಮತ್ತೆ ಗಣಿ ಇಲಾಖೆ ನೋಟಿಸ್ ನೀಡಿದೆ. ಆದ್ರೂ ಇದಕ್ಕೆ ಕ್ಯಾರೆ ಎನ್ನದೇ ಕ್ವಾರಿಗಳಲ್ಲಿ ಗಣಿಗಾರಿಕೆ ನಡಿತಿದೆ. ರಾತ್ರಿ ಹಗಲು ಎನ್ನದೆ ಬ್ಲಾಸ್ಟಿಂಗ್ ಮಾಡಿ ಗಣಿಗಾರಿಕೆ ಮಾಡಲಾಗುತ್ತಿದೆ. ಇದು ಗದಗ ಜಿಲ್ಲೆ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.

blank

ಕಪ್ಪತ್ತಗುಡ್ಡ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆದಿರೋ ಫಲವಾಗಿ ವನ್ಯಜೀವಿ ಧಾಮವೆಂದು ಘೋಷಣೆಯಾಗಿದೆ. ಗಣಿ ಮಾಲೀಕರು ಪ್ರಭಾವಿಗಳು ಇರೋದ್ರಿಂದ ಜಿಲ್ಲಾಡಳಿತ ಹಾಗೂ ಸರ್ಕಾರದ ಮೇಲೆ ಒತ್ತಡಕ್ಕೆ ಮಣಿದು ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಗದಗ ಜಿಲ್ಲಾಧಿಕಾರಿ ಸುಂದರೇಶಬಾಬು ಅವ್ರನ್ನು ಕೇಳಿದ್ರೆ.. ಸುಪ್ರೀ ಕೋರ್ಟ್​ ತೀರ್ಪು ಹಾಗೂ ಅರಣ್ಯ ಇಲಾಖೆ ನಿಯಮಗಳಂತೆ ಪರಿಶೀಲನೆ ಮಾಡಿ ಮತ್ತೊಮ್ಮೆ ನೋಟಿಸ್ ನೀಡಿ ಪರಿಶೀಲನೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

blank

ಕಪ್ಪತ್ತಗುಡ್ಡ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡಿತಿದೆ.. ಆದ್ರೆ, ಇದಕ್ಕೆ ಬ್ರೆಕ್ ಹಾಕಬೇಕಾದ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೌನ ವಹಿಸಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Source: newsfirstlive.com Source link