‘ಯಾವ ಮಂತ್ರಿಯನ್ನು ಮನೆಗೆ ಕರೆದಿಲ್ಲ’ -ಪ್ರೀತಂಗೌಡ ಹೇಳಿಕೆಗೆ ರೇವಣ್ಣ ಚಾಟಿ

‘ಯಾವ ಮಂತ್ರಿಯನ್ನು ಮನೆಗೆ ಕರೆದಿಲ್ಲ’ -ಪ್ರೀತಂಗೌಡ ಹೇಳಿಕೆಗೆ ರೇವಣ್ಣ ಚಾಟಿ

ಹಾಸನ: ಯಾವ ಮಂತ್ರಿಯನ್ನು ಮನೆಗೆ ಬನ್ನಿ ಅಂತ ಕರೆಯಲ್ಲ. ಬಂದವರನ್ನು ಚೆನ್ನಾಗಿ ನೋಡಿಕೊಳ್ಳದೇ ಇರೋಲ್ಲ ಅಂತ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ತಿಳಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ದೇವೇಗೌಡರ ಮನೆಗೆ ಸಿಎಂ ಭೇಟಿ ಬಗ್ಗೆ ಪ್ರೀತಂಗೌಡ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ರೇವಣ್ಣ, ಸಿಎಂ ಆದವರು ಒಂದು ಪಕ್ಷಕ್ಕೆ ಸೀಮಿತ ಅಲ್ಲ. ಅವರು ಪ್ರಮಾಣ ವಚನ ಸ್ವೀಕಾರ ಮಾಡುವಾಗ ದಯವಿಟ್ಟು ಯಾವ ಸಚಿವರು ವಿಪಕ್ಷ ನಾಯಕರ ಮನೆಗೆ ಹೋಗಬೇಡಿ ಅಂತ ಹೇಳಿರಲ್ಲ. ಹಾಗೇ ಸಚಿವರು, ಶಾಸಕರಾಗದವರು ನಮ್ಮ ಮನೆಗೆ ಬರದೇ ಹೋದ್ರೆ ನಮ್ಮಪ್ಪನ ಮನೆ ಗಂಟು ಹೋಗಲ್ಲ ಅಂತ ತೀಕ್ಷ್ಣವಾಗಿ ಚಾಟಿ ಬೀಸಿದ್ರು. ಅಲ್ಲದೇ ನಮ್ಮ ಮನೆಗೆ ಬಂದ್ರೆ ಊಟ ಹಾಕ್ತೀವಿ, ಬಂದಿಲ್ಲ ಅಂದ್ರೆ ಅದೇ ದುಡ್ಡು ಉಳಿತು ಅಂತ ಸುಮ್ಮನಾಗ್ತೀವಿ ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ತಿಳಿಸಿದ್ರು.

Source: newsfirstlive.com Source link