ಕೊರೊನಾಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು -ಸಾಯೋ ಮುನ್ನ ಕಮಿಷನರ್​ಗೆ ವಾಯ್ಸ್ ಮೆಸೇಜ್

ಕೊರೊನಾಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು -ಸಾಯೋ ಮುನ್ನ ಕಮಿಷನರ್​ಗೆ ವಾಯ್ಸ್ ಮೆಸೇಜ್

ಮಂಗಳೂರು: ಕೊರೊನಾ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರು ನಗರ ಹೊರವಲಯದ ಚಿತ್ರಾಪುರ ಎಂಬಲ್ಲಿ ನಡೆದಿದೆ.

ಚಿತ್ರಾಪುರದ ರೆಹೆಜಾ ಅಪಾರ್ಟ್ಮೆಂಟ್ ನಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವನ್ನಪ್ಪಿದ್ದವರು ರಮೇಶ್ ಮತ್ತು ಗುಣ ಎಂದು ತಿಳಿದು ಬಂದಿದೆ. ಚಿತ್ರಾಪುರದ ಫ್ಲ್ಯಾಟ್​​ನಲ್ಲಿ ವಾಸವಿದ್ದ ದಂಪತಿ ಒಂದು ವಾರದಿಂದ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾರೆ.

blank

ಆತ್ಮಹತ್ಯೆ ಮಾಡುವ ಮುನ್ನ ಬಳಿಕ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್, ಸತ್ಯಜಿತ್ ಸುರತ್ಕಲ್​​ಗೂ ಸೇರಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ರಮೇಶ್​ ವಾಯ್ಸ್ ಮೆಸೇಜ್ ಮಾಡಿದ್ದರು. ವಾಯ್ಸ್​ ಮೆಸೇಜ್​​ನಲ್ಲಿ ಅಂತ್ಯಕ್ರಿಯೆಯನ್ನು ಮಾಡುವಂತೆ, ಅದಕ್ಕಾಗಿ ಒಂದು ಲಕ್ಷ ರೂಪಾಯಿ ಇಟ್ಟಿರೋದಾಗಿ ಮನವಿ ಮಾಡಿದ್ದರು ಎನ್ನಲಾಗಿದೆ.

ಅಲ್ಲದೇ ಮನೆಯ ಉಪಕರಣ ಮಾರಾಟ ಮಾಡಿ ಬಡವರಿಗೆ ನೀಡುವಂತೆ ದಂಪತಿ ಮನವಿ ಮಾಡಿದ್ದು, ವಾಯ್ಸ್ ಮೆಸೇಜ್ ಬಂದ ಕೂಡಲೇ ಅಡ್ರೆಸ್ ಟ್ರ್ಯಾಕ್ ಮಾಡಲು ಕಮಿಷನರ್ ಸೂಚನೆ ನೀಡಿದ್ದರು. ಆದರೆ ಪೊಲೀಸರು ಮನೆ ತಲುಪುವ ವೇಳೆಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

blank

Source: newsfirstlive.com Source link