ವಿವಾಹಿತನೊಂದಿಗೆ ಪ್ರೀತಿ -ಮದುವೆಗೆ ನಿರಾಕರಿಸಿದಕ್ಕೆ ಮನನೊಂದ ಪ್ರೇಮಿಗಳ ಆತ್ಮಹತ್ಯೆ

ವಿವಾಹಿತನೊಂದಿಗೆ ಪ್ರೀತಿ -ಮದುವೆಗೆ ನಿರಾಕರಿಸಿದಕ್ಕೆ ಮನನೊಂದ ಪ್ರೇಮಿಗಳ ಆತ್ಮಹತ್ಯೆ

ಚಿತ್ರದುರ್ಗ: ವಿವಾಹಿತನ ಜೊತೆ ಮದುವೆ ಮಾಡಲು ಯುವತಿ ಪೊಷಕರು ನಿರಾಕರಣೆ ಹಿನ್ನೆಲೆ, ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೂನಿಕೆರೆ ಬಳಿ ನಡೆದಿದೆ.

ಇದನ್ನೂ ಓದಿ:  ಕೊರೊನಾಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು -ಸಾಯೋ ಮುನ್ನ ಕಮಿಷನರ್​ಗೆ ವಾಯ್ಸ್ ಮೆಸೇಜ್

ಪರಶುರಾಮಪುರ ನಿವಾಸಿ, ತಿಪ್ಪೇಸ್ವಾಮಿ (32), ಉಡುವಳ್ಳಿ ನಿವಾಸಿ ಪುಷ್ಪಲತಾ(21), ಆತ್ಮಹತ್ಯೆಗೆ ಶರಣಾದವರು. ಮೃತ ತಿಪ್ಪೇಸ್ವಾಮಿ ವಿವಾಹಿತನಾಗಿದ್ದು, ಆತನನ್ನು ಪುಷ್ಪಲತಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದಳಂತೆ. ಅವನನ್ನೆ ಮದುವೆಯಾಗುವದಾಗಿ ಹೇಳಿದ್ದಳಂತೆ. ಆದರೆ ವಿವಾಹಿತನ ಜೊತೆ ಮದುವೆ ಮಾಡಲು ಮನೆಯವರು ನಿರಾಕರಿಸಿದ್ದರು ಎನ್ನಲಾಗಿದ್ದು, ಇದರಿಂದ ಮನನೊಂದ ಪುಷ್ಪಲತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ತಿಪ್ಪೇಸ್ವಾಮಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Source: newsfirstlive.com Source link