‘ಕಮಾಲ್ ಕರ್ ದಿಯಾ’ ಐತಿಹಾಸಿಕ ಗೆಲುವಿಗೆ ಕ್ರಿಕೆಟ್ ದಿಗ್ಗಜರ ಶ್ಲಾಘನೆ

‘ಕಮಾಲ್ ಕರ್ ದಿಯಾ’ ಐತಿಹಾಸಿಕ ಗೆಲುವಿಗೆ ಕ್ರಿಕೆಟ್ ದಿಗ್ಗಜರ ಶ್ಲಾಘನೆ

ಕ್ರಿಕೆಟ್ ಕಾಶಿ ಲಾರ್ಡ್ಸ್​ನಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಅತಿಥೇಯ ಇಂಗ್ಲೆಂಡ್ ತಂಡವನ್ನ 151 ರನ್​ಗಳ ಅಂತರದಿಂದ ಮಣಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ ಆಟಗಾರರು ತೋರಿದ ದಿಟ್ಟ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇದರೊಂದಿಗೆ ಲಾರ್ಡ್ಸ್​ನಲ್ಲಿ 7 ವರ್ಷಗಳ ಗೆದ್ದ ಸಾಧನೆ ಮಾಡಿದ ವಿರಾಟ್​ ಪಡೆಗೆ ಶುಭಾಶಯಗಳ ಮಹಾಪುರವೇ ಹರಿದು ಬರುತ್ತಿದೆ. ಮಾಜಿ ಕ್ರಿಕೆಟ್​​ರ್​ಗಳಾದ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ವಿರಾಟ್​ ಪಡೆಯ ಶ್ರೇಷ್ಠ ಪ್ರದರ್ಶನವನ್ನ ಕೊಂಡಾಡಿದ್ದಾರೆ.

6 ವಿಕೆಟ್​ ಕಳೆದುಕೊಂಡು 181 ರನ್​ಗಳೊಂದಿಗೆ 5ನೇ ದಿನದಾಟ​ ಆರಂಭಿಸಿದ ಟೀಮ್ ಇಂಡಿಯಾ, ಆರಂಭದಲ್ಲೇ ರಿಷಭ್ ಪಂತ್, ಇಶಾಂತ್ ಶರ್ಮಾ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಆದ್ರೆ, ಯಾರೂ ಊಹೆ ಮಾಡದ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ಮಹಮ್ಮದ್ ಶಮಿ – ಜಸ್​ಪ್ರೀತ್​ ಬೂಮ್ರಾ, 9ನೇ ವಿಕೆಟ್​ಗೆ ಅಜೇಯ 89 ರನ್​ಗಳ ಜೊತೆಯಾಟವಾಡಿದರು. ಮಹಮ್ಮದ್ ಶಮಿ ಅಜೇಯ 56 ರನ್ ಗಳಿಸಿದ್ರೆ, ಬೂಮ್ರಾ ಅಜೇಯ 34 ರನ್ ಸಿಡಿಸಿದ್ರು. ಭೋಜನ ವಿರಾಮದ ಬಳಿಕ 298 ರನ್​ಗಳಿಗೆ ಡಿಕ್ಲೇರ್​ ಘೋಷಿಸಿದ ಟೀಮ್ ಇಂಡಿಯಾ, ಅತಿಥೇಯ ಇಂಗ್ಲೆಂಡ್​ಗೆ 272 ರನ್ ಗಳ ಟಾರ್ಗೆಟ್​ ನೀಡಿತು. ಆದ್ರೆ, ಈ ಸವಾಲು ಗೆಲ್ಲುವ ಲೆಕ್ಕಚಾರ ಹಾಕಿದ್ದ ರೂಟ್ ಪಡೆ, ಟೀಮ್ ಇಂಡಿಯಾ ಬೌಲರ್​ಗಳು ಆರಂಭದಲ್ಲೇ ಅಘಾತ ನೀಡಿ ದಿಕ್ಕು ತಪ್ಪಿಸಿದರು. ಪಂದ್ಯವಿಡೀ ಹೋರಾಟದ ಮನೋಭಾವ ತೋರಿದ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡವನ್ನ 51.5 ಓವರ್​ಗಳಲ್ಲಿ 120 ರನ್ ಗಳಿಗೆ ಕಟ್ಟಿಹಾಕಿದರು. ಆ ಮೂಲಕ ಎದುರಾಳಿಯ ಸ್ಲೆಡ್ಜಿಂಗ್​ಗೆ ಆಟದ ಮೂಲಕವೇ ಉತ್ತರ ನೀಡಿದರು. ಇನ್ನೂ ಈ ಟೀಮ್ ಇಂಡಿಯಾದ ಈ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರು ಕೊಂಡಾಡಿದ್ದಾರೆ.

 

 

Source: newsfirstlive.com Source link