ಪೊಲೀಸರ ಕಣ್ತಪ್ಪಿಸಿ, ಕಾಂಪೌಡ್ ಹಾರಿ ಐವರು ವಿದೇಶಿ ಮಹಿಳೆಯರು ಎಸ್ಕೇಪ್

– ಮಹಿಳಾ ಸ್ಟೇಟ್ ಹೋಂನಿಂದ ಪರಾರಿ

ಬೆಂಗಳೂರು: ಕಾಂಪೌಂಡ್ ಹಾರಿ ಐವರು ವಿದೇಶಿ ಮಹಿಳೆಯರು ಸ್ಟೇಟ್ ಹೋಂ ನಿಂದ ಎಸ್ಕೇಪ್ ಆಗಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಸಾ, ಪಾಸ್ ಪೋರ್ಟ್ ಮುಗಿದಿದ್ದ ಮೂವರು ಕಾಂಗೋ, ಇಬ್ಬರು ನೈಜಿರೀಯನ್ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಬೆಂಗಳೂರಿನ ಮಹಿಳಾ ಸ್ಟೇಟ್ ಹೋಂ ನಲ್ಲಿ ಇರಿಸಲಾಗಿತ್ತು. ಆದರೆ ತಡರಾತ್ರಿ ಪೊಲೀಸರ ಕಣ್ತಪ್ಪಿಸಿ ಐವರು ವಿದೇಶಿ ಮಹಿಳೆಯರು ಕಾಂಪೌಡ್ ಹಾರಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಆರೋಗ್ಯ ಸ್ಥಿತಿ ಗಂಭೀರ- ದಂಪತಿ ಆತ್ಮಹತ್ಯೆ

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಎಸ್ಕೇಪ್ ಆಗಿರುವ ವಿದೇಶಿ ಮಹಿಳಾ ಪ್ರಜೆಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮಹಿಳೆಯರು ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ.

Source: publictv.in Source link