ದಕ್ಷಿಣ ಕನ್ನಡ: ನೆಗೆಟಿವ್​ ವರದಿಯೊಂದಿಗೆ ಕೇರಳದಿಂದ ಬಂದಿದ್ದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್

ದಕ್ಷಿಣ ಕನ್ನಡ: ನೆಗೆಟಿವ್​ ವರದಿಯೊಂದಿಗೆ ಕೇರಳದಿಂದ ಬಂದಿದ್ದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್

ದಕ್ಷಿಣ ಕನ್ನಡ: ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಬಹುಪಾಲು ಕೇರಳದ ವಿದ್ಯಾರ್ಥಿಗಳಿಂದಲೇ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು ಕೂಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ.

ಕೇರಳದಿಂದ, ಜಿಲ್ಲೆಯ ಕಾಲೇಜುಗಳಿಗೆ ಬಂದ ಬರೋಬ್ಬರಿ 228 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಜಿಲ್ಲೆಯಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ.

ಸದ್ಯದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ನಿನ್ನೆ ಒಂದೇ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 284 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, 3,555 ಕೊರೊನಾ ಆಕ್ಟಿವ್ ಪ್ರಕರಣಗಳು ಜಿಲ್ಲೆಯಲ್ಲಿವೆ. RTPCR ನೆಗೆಟಿವ್ ವರದಿಯೊಂದಿಗೆ ಬಂದ ಕೇರಳ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ.

ಇದನ್ನೂ ಓದಿ: ಗಡಿ ಜಿಲ್ಲಾಡಳಿತಗಳ ನಿದ್ದೆಗೆಡಿಸಿದ ನಕಲಿ RTPCR ವರದಿಗಳ ಹಾವಳಿ

RTPCR ನೆಗೆಟಿವ್ ವರದಿ ಇದ್ದರೂ ಒಂದು ವಾರ ಐಸೋಲೆಷನ್ ನಲ್ಲಿ ಇರುವಂತೆ ಜಿಲ್ಲಾಡಾಳಿತ ಕಡ್ಡಾಯ ಆದೇಶ ಮಾಡಿತ್ತು.ಆ ಪ್ರಕಾರ ವಾರದ ಬಳಿಕ RTPCR ಟೆಸ್ಟ್ ಮಾಡಿಸಿದಾಗ ಮತ್ತೆ ಪಾಸಿಟಿವ್ ಬರುತ್ತಿದ್ದು, ವಿದ್ಯಾರ್ಥಿಗಳು ನಕಲಿ ನೆಗೆಟಿವ್​ವರದಿಗಳನ್ನು ತರುತ್ತಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಇನ್ನು ಜಿಲ್ಲಾಡಳಿತ ಗಡಿಭಾಗಗಳಲ್ಲಿ ಮತ್ತಷ್ಟು ಕಠಿಣ ತಪಾಸಣೆ ನಡೆಸಲು ಆದೇಶ ನೀಡಿದ್ದು, ಕೇರಳ ವಿದ್ಯಾರ್ಥಿಗಳ ನೆಗೆಟಿವ್​ ವರದಿಗಳ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಿದೆ.

 

Source: newsfirstlive.com Source link