ಲಾರ್ಡ್ಸ್​​​ನಲ್ಲಿ ಟೀಂ ಇಂಡಿಯಾಗೆ 3ನೇ ಗೆಲುವು -ಕ್ರಿಕೆಟ್​ ದಿಗ್ಗಜ ಕ್ಲೀವ್ ಲಾಯ್ಡ್ ದಾಖಲೆ ಮುರಿದ ಕೊಹ್ಲಿ

ಲಾರ್ಡ್ಸ್​​​ನಲ್ಲಿ ಟೀಂ ಇಂಡಿಯಾಗೆ 3ನೇ ಗೆಲುವು -ಕ್ರಿಕೆಟ್​ ದಿಗ್ಗಜ ಕ್ಲೀವ್ ಲಾಯ್ಡ್ ದಾಖಲೆ ಮುರಿದ ಕೊಹ್ಲಿ

ಲಾರ್ಡ್ಸ್​ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, 2ನೇ ಪಂದ್ಯದ ಗೆಲುವಿನೊಂದಿಗೆ ಮಹತ್ವದ ದಾಖಲೆಗಳನ್ನ ನಿರ್ಮಿಸಿದ್ದಾರೆ.

ಲಾರ್ಡ್ಸ್​​ಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡವನ್ನ 151 ರನ್​ಗಳಿಂದ ಮಣಿಸಿತು. ಇದರೊಂದಿಗೆ ಕ್ಯಾಪ್ಟನ್ ಕೊಹ್ಲಿ ನಾಯಕನಾಗಿ ಅತೀ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟ 4ನೇ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

blank

ವಿರಾಟ್​ ಕೊಹ್ಲಿ ನಾಯಕನಾಗಿ ಇದುವರೆಗೆ 63 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿದ್ದು, ಈ ಪೈಕಿ 37 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಈ ಪಟ್ಟಿಯಲ್ಲಿ ಸೌತ್​ ಆಫ್ರಿಕಾದ ಗ್ರೇಮ್ ಸ್ಮಿತ್ ಅಗ್ರ ಸ್ಥಾನದಲ್ಲಿದ್ದು, 109 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿ 53 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಆಸ್ಚ್ರೇಲಿಯಾದ ರಿಕ್ಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದು, 77 ಪಂದ್ಯಗಳ ಪೈಕಿ 48 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನೂ ಮತ್ತೊರ್ವ ಆಸಿಸ್ ಮಾಜಿ ನಾಯಕ ಸ್ಟೀವ್ ವಾ 3ನೇ ಸ್ಥಾನದಲ್ಲಿದ್ದು, 57 ಪಂದ್ಯಗಳ ಪೈಕಿ 41ರಲ್ಲಿ ಗೆಲುವಿನ ದಡ ಸೇರಿಸಿದ್ದಾರೆ. ಅಷ್ಟೇ ಅಲ್ಲದೆ, 74 ಪಂದ್ಯಗಳಿಂದ 36 ಗೆಲುವು ಸಾಧಿಸಿದ್ದ ಕ್ಲೀವ್ ಲಾಯ್ಡ್, ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ.​

ಇನ್ನೂ ಇದೇ ವೇಳೆ ಮತ್ತೊಂದು ದಾಖಲೆ ಬರೆದಿದ್ದು, ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನ ಗೆದ್ದ ಟೀಮ್ ಇಂಡಿಯಾದ 3ನೇ ನಾಯಕ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಹಿಂದೆ 1986ರಲ್ಲಿ ಕಪಿಲ್ ದೇವ್, 2014ರಲ್ಲಿ ಎಮ್​.ಎಸ್.ಧೋನಿ ಈ ಸಾಧನೆ ಮಾಡಿದ್ದು, ಈ ಪಟ್ಟಿಗೆ ಹೊಸದಾಗಿ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ.

Source: newsfirstlive.com Source link