ಲವ್ ಸ್ಟೋರಿ ಚಿತ್ರದಲ್ಲಿ ಶಿವರಾಜ್​​ಕುಮಾರ್​ -ಕ್ಲಾಪ್​​ ಮಾಡಿ ಶುಭಕೋರಿದ ಕೆಚ್ಚ ಸುದೀಪ್

ಲವ್ ಸ್ಟೋರಿ ಚಿತ್ರದಲ್ಲಿ ಶಿವರಾಜ್​​ಕುಮಾರ್​ -ಕ್ಲಾಪ್​​ ಮಾಡಿ ಶುಭಕೋರಿದ ಕೆಚ್ಚ ಸುದೀಪ್

“ನೀ ಸಿಗೋವರೆಗೂ” ಇದು ಕನ್ನಡ ಹ್ಯಾಟ್ರಿಕ್​ ಹೀರೊ ಡಾ. ಶಿವ ರಾಜ್​ಕುಮಾರ್​ ಅವರ 124ನೇ ಸಿನಿಮಾದ ಟೈಟಲ್. ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ಚಿತ್ರದ ಮುಹೂರ್ತ ನೆರವೇರಿಸಲಾಯಿತು. ಇನ್ನು ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​ ಮುಖ್ಯ ಅತಿಥಿಯಾಗಿ ಅಗಮಿಸಿದ್ರು.

blank

ಬೈರಾಗಿ, ವೇದ ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿರೋ ಶಿವಣ್ಣರ ಭಜರಂಗಿ 2 ಸಿನಿಮಾ ಕೂಡ ಮುಂದಿನ ತಿಂಗಳು ಸೆಪ್ಟಂಬರ್​ 10 ನೇ ತಾರೀಖಿನಂದು ಬಿಡುಗಡೆಗೆ ಸಜ್ಜಾಗಿ ನಿಂತ್ತಿದೆ. ಇನ್ನು ಇದೀಗ ಶಿವಣ್ಣರ 124ನೇ ಚಿತ್ರದ ಮುಹೂರ್ತ ಕೂಡ ನೆರವೇರಿಸಲಾಗಿದೆ.

blank

ಇನ್ನು ಶಿವಣ್ಣರ ಭಜರಂಗಿ 2 ಚಿತ್ರದಲ್ಲಿ ಬರುವ “ನೀ ಸಿಗೋವರೆಗೂ” ಎಂಬ ಸುಮಧುರವಾಗಿದ ಹಾಡೇ ಇದೀಗ ಶಿವಣ್ಣರ 124ನೇ ಸಿನಿಮಾದ ಟೈಟಲ್​ ಆಗಿರೋದು ವಿಶೇಷ. ಬಾಲ ಶ್ರೀರಾಮ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಈ ಚಿತ್ರ ನಿರ್ಮಾಣವಾಗಲಿದು ರಾಮ್​ ಧುಳಿಪುಡಿ ಈ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳಲಿದ್ದಾರೆ. ಆಥಿತಿಯಾಗಿ ಆಗಮಿಸಿದ ಕಿಚ್ಚ ಸುದೀಪ್​ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್​ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

blank

Source: newsfirstlive.com Source link