T20 World Cup: ಇಂಡೋ-ಪಾಕ್​ ನಡುವಿನ ಹೈ-ವೋಲ್ಟೇಜ್ ಮ್ಯಾಚ್​​ ಡೇಟ್​​​ ಫಿಕ್ಸ್​

T20 World Cup: ಇಂಡೋ-ಪಾಕ್​ ನಡುವಿನ ಹೈ-ವೋಲ್ಟೇಜ್ ಮ್ಯಾಚ್​​ ಡೇಟ್​​​ ಫಿಕ್ಸ್​

ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್​ ಅಂದ್ರೆ ಕ್ರಿಕೆಟ್ ಜಗತ್ತಿನ ಮಹಾಯುದ್ಧ ಎಂದೇ ಹೇಳಲಾಗುತ್ತೆ. ಜಿದ್ದಾಜಿದ್ದಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. T20 World Cupನಲ್ಲಿ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ದುಬೈನಲ್ಲಿ ಸೆಣಸಾಟ ನಡೆಸಲಿವೆ ಅಂತಾ ಐಸಿಸಿ ತಿಳಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಪುರುಷರ ಟಿ-20 ವಿಶ್ವಕಪ್​ ಪಂದ್ಯವನ್ನ UAE ನಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್​ 17 ರಿಂದ ನವೆಂಬರ್​ 14 ರಂದು ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ. ಇನ್ನು ಉದ್ಘಾಟನಾ ಪಂದ್ಯವು ಓಮನ್ ಮತ್ತು ಪಪುವಾ ದೇಶಗಳ ಮಧ್ಯೆ ನಡೆಯಲಿದೆ. ಇನ್ನು ಎರಡನೇ ಪಂದ್ಯವೂ ಸ್ಕಾಟ್​​ಲೆಂಡ್ ಮತ್ತು ಬಾಂಗ್ಲಾದೇಶ ಮಧ್ಯೆ ಸಂಜೆ ನಡೆಯಲಿದೆ

ಟಿ20 ವರ್ಲ್ಡ್​ಕಪ್​​ಗೆ ಭಾರತವೇ ಆತಿಥ್ಯ ವಹಿಸಲಿದೆ. ಹಾಗಾಗಿ ದೇಶ ಅಥವಾ ದೇಶದ ಹೊರಗಡೆ ಎಲ್ಲೇ ಟೂರ್ನಿಯನ್ನ ಆಯೋಜಿಸಿದ್ರೂ ಬಿಸಿಸಿಐ ಬಳಿಯೇ ಆಯೋಜನೆ ಹಕ್ಕು ಇರಲಿದೆ.

Source: newsfirstlive.com Source link