ಕಾಂಪೌಂಡ್ ಹಾರಿ ಎಸ್ಕೇಪ್ ಆದ 5 ವಿದೇಶಿ ಮಹಿಳೆಯರು! ಪೊಲೀಸರಿಂದ ತೀವ್ರ ಹುಡುಕಾಟ

ಕಾಂಪೌಂಡ್ ಹಾರಿ ಎಸ್ಕೇಪ್ ಆದ 5 ವಿದೇಶಿ ಮಹಿಳೆಯರು! ಪೊಲೀಸರಿಂದ ತೀವ್ರ ಹುಡುಕಾಟ

ಬೆಂಗಳೂರು: ಕಾಂಪೌಂಡ್ ಹಾರಿ ಐವರು ವಿದೇಶಿ ಮಹಿಳೆಯರು ಎಸ್ಕೇಪ್ ಆದ ಘಟನೆ ರಾಜಧಾನಿ ಬೆಂಗಳೂರಲ್ಲಿ ನಡೆದಿದೆ. ಪೊಲೀಸರು ಕಾನೂನು ಬಾಹಿರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೆಲ ವಿದೇಶಿ ಮಹಿಳೆಯರನ್ನು ಮಹಿಳಾ ಸ್ಟೇಟ್ ಹೋಂ ನಲ್ಲಿ ಇರಿಸಿದ್ದರು. ಆದರೆ ಐವರು ವಿದೇಶಿ ಮಹಿಳೆಯರು ಇದೀಗ ಮಹಿಳಾ ಸ್ಟೇಟ್ ಹೋಮ್ ನಿಂದ ಎಸ್ಕೇಪ್ ಆಗಿದ್ದಾರೆ.

ವೀಸಾ, ಪಾಸ್ ಪೋರ್ಟ್ ಅವಧಿ ಮುಗಿದಿದ್ದ 13 ಜನ ವಿದೇಶಿ ಮಹಿಳೆಯರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದರು. ಅದರಲ್ಲಿ ಮೂರು ಜನ ಕ್ಯಾಮರೂನ್​, ಇಬ್ಬರು ನೈಜಿರೀಯನ್ ಮಹಿಳೆಯರು ತಡರಾತ್ರಿ ಎಸ್ಕೇಪ್​ ಆಗಿದ್ದಾರೆ. ಮೂರು ಪಾಳಿಗಳಲ್ಲಿ ಭದ್ರತೆ ನಿಯೋಜನೆ ಮಾಡಿದ್ದರೂ, ನಿನ್ನೆ ತಡರಾತ್ರಿ ಪೊಲೀಸರ ಕಣ್ತಪ್ಪಿಸಿ ಐವರು ವಿದೇಶಿ ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ವಿವಾಹಿತನೊಂದಿಗೆ ಪ್ರೀತಿ -ಮದುವೆಗೆ ನಿರಾಕರಿಸಿದಕ್ಕೆ ಮನನೊಂದ ಪ್ರೇಮಿಗಳ ಆತ್ಮಹತ್ಯೆ

ಎಸ್ಕೇಪ್​ ಆಗೋ ವೇಳೆ ಓರ್ವ ಮಹಿಳೆಗೆ ಕಾಲು ಮುರಿತ..

ಮಧ್ಯರಾತ್ರಿ ಎರಡೂವರೆ ಸುಮಾರಿಗೆ ಕುಡಿಯಲು ನೀರು ಕೇಳಿದ್ದ ವಿದೇಶಿ ಮಹಿಳೆಯರು ಭದ್ರತಾ ಸಿಬ್ಬಂದಿಯ ಗಮನವನ್ನ ಬೇರೆಡೆ ವರ್ಗಾಯಿಸಿ, ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಬಾಗಿಲು ತೆಗೆದು ಕುಡಿಯಲು ನೀರು ಕೊಟ್ಟಿದ್ದರು. ಇದೇ ಸಮಯ ಉಪಯೋಗಿಸಿಕೊಂಡು ವಿದೇಶಿ ಮಹಿಳೆಯರು ಎಸ್ಕೇಪ್ ಆಗಿದ್ದಾರೆ.

ಆದರೆ ಕಾಂಪೌಂಡ್ ಹಾರುವ ವೇಳೆ ಓರ್ವ ಮಹಿಳೆಗೆ ಕಾಲು ಮುರಿದಿದೆ. ಆ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲು‌ ಮಾಡಿದ್ದಾರೆ. ಇನ್ನು ಎಸ್ಕೇಪ್ ಆಗಿರುವ ಉಳಿದ ವಿದೇಶಿ ಮಹಿಳೆಯರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

Source: newsfirstlive.com Source link