ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

ಆಫ್ಘಾನ್​​ನಿಂದ ತಾಯ್ನಾಡಿಗೆ 120 ಮಂದಿ ಭಾರತೀಯರು- ರಣಾಂಗಣದಂತಾದ ಅಫ್ಘಾನಿಸ್ತಾನದಿಂದ ರಕ್ಷಣೆಯೇ ರೋಚಕ

ನವದೆಹಲಿ: ಆಫ್ಘಾನ್​​ನಲ್ಲಿ ನೆಲೆಸಿರುವ ಭಾರತೀಯರನ್ನ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಭರದಿಂದ ಸಾಗಿದೆ. ಇದೀಗ ಭಾರತೀಯ ವಾಯು ಸೇನೆಯ C-17 ವಿಮಾನದ ಮೂಲಕ ಕಾಬೂಲ್​ನಿಂದ ಎರಡನೇ ಬ್ಯಾಚ್​ ಗುಜರಾತ್​​ನ ಜಮ್ನಘರ್​ಗೆ ಬಂದಿಳಿದಿದೆ.

blank

ಒಟ್ಟು 120 ಮಂದಿ ಆಫ್ಘಾನ್​​ನಿಂದ ಕರೆದುಕೊಂಡು ಬರಲಾಗಿದ್ದು, ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಇತರೆ ಅಧಿಕಾರಿಗಳು ಹಾಗೂ ಪತ್ರಕರ್ತರನ್ನ ಕರೆದುಕೊಂಡು ಬರಲಾಗಿದೆ. ಅಫ್ಘಾನಿಸ್ತಾನದ ಹಿಮದ್​​ ಕರ್ಜೈ ಏರ್​​ಪೋರ್ಟ್​ನಿಂದ ಬೆಳಗ್ಗೆ 8 ಗಂಟೆಗೆ ಟೇಕ್​ಅಪ್ ಆಗಿತ್ತು. ಇದೀಗ 120 ಮಂದಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಇದನ್ನೂ ಓದಿ: ಕಾಬೂಲ್​ಗೆ ಬಂದ 1 ಸಾವಿರ ​​ಸೈನಿಕರಿಂದ ಇಂಗ್ಲೆಂಡ್​​ ನಾಗರಿಕರ ರಕ್ಷಣೆ

blank

ಇದನ್ನೂ ಓದಿ: ತಾಲಿಬಾನಿಗಳು ಅಂದ್ರೆ ಏನು?; ತಾಲಿಬಾನ್​​ ಮುಖ್ಯಸ್ಥ ಅಬ್ದುಲ್ ಗನಿ ಯಾರು..?

ಇನ್ನು ಐಎಎಫ್​​ನ ಈ ವಿಮಾನವು ದೆಹಲಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಲುಪಲಿದೆ. ಇನ್ನು ಆಫ್ಘಾನ್​​ನಿಂದ ಮೊದಲ ಬ್ಯಾಚ್​ ನಿನ್ನೆ ಭಾರತಕ್ಕೆ ಬಂದಿದೆ. ಅಫ್ಫಾನಿಸ್ತಾನದಲ್ಲಿರುವ ಇತರೇ ಭಾರತೀಯರನ್ನ ಕರೆದುಕೊಂಡು ಬರಲು ಸದ್ಯ ವ್ಯವಸ್ಥೆಗಳನ್ನ ಮಾಡಲಾಗುತ್ತಿದೆ. ಈ ವ್ಯವಸ್ಥೆಗೆ ಮತ್ತಷ್ಟು ಅನುಕೂಲ ಆಗಲು ಅಮೆರಿಕ ಸೇನೆಯ ಸಹಾಯಕ್ಕಾಗಿ ಕಾದಿದೆ.

ಇದನ್ನೂ ಓದಿ: ಅಫ್ಘಾನ್​​ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ಭೇಟಿಯಾದ ತಾಲಿಬಾನ್​​ ನೀಡಿದ ಭರವಸೆಯೇನು?

Source: newsfirstlive.com Source link