ಮದುವೆ ನಿಶ್ಚಯವಾಗಿದ್ದ ಯುವತಿ – ವಿವಾಹಿತ ಪ್ರೇಮಿಯೊಂದಿಗೆ ಆತ್ಮಹತ್ಯೆಗೆ ಶರಣು

ಚಿತ್ರದುರ್ಗ: ಮದುವೆ ನಿಶ್ಚಯವಾಗಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಬಳಿ ನಡೆದಿದೆ.

ಕಳೆದ ಆರು ತಿಂಗಳ ಹಿಂದೆ ಹಿರಿಯೂರು ತಾಲೂಕಿನ ಉಡುವಳ್ಳಿ ಗ್ರಾಮಕ್ಕೆ ಪೈಂಟ್ ಕೆಲಸಕ್ಕಾಗಿ ಬಂದಿದ್ದ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಮೂಲದ ತಿಪ್ಪೇಸ್ವಾಮಿ ಎಂಬ ಆಸಾಮಿಯು, ಪುಷ್ಪಲತಾರನ್ನು ಪ್ರೇಮಿಸಿದ್ದನು. ಈ ತಿಪ್ಪೇಸ್ವಾಮಿಗೆ ಈಗಾಗಲೇ ವಿವಾಹವಾಗಿದ್ದು, ತನ್ನ ಪತ್ನಿಗೆ ಮಕ್ಕಳಾಗದ ಹಿನ್ನೆಲೆಯಲ್ಲಿ ಉಡುವಳ್ಳಿ ಗ್ರಾಮದ ಪುಷ್ಪಲತಾರನ್ನು ಪ್ರೇಮಿಸಿ, ಅದೇ ಗ್ರಾಮಕ್ಕೆ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದ.

ಪುಷ್ಪಲತ ಹಾಗೂ ತಿಪ್ಪೇಸ್ವಾಮಿ ನಡುವಿನ ಪ್ರೀತಿ ಅಗಾಧವಾಗಿ ಬೆಳೆದಿದ್ದು, ಆಕೆಯನ್ನು ವಿವಾಹವಾಗುವುದಾಗಿ ಪುಷ್ಪಲತಳ ಮನೆಯಲ್ಲಿ ತಿಪ್ಪೇಸ್ವಾಮಿ ಕೇಳಿದ್ದನು. ಆದರೆ ಅವರ ಪ್ರೀತಿಗೆ ಪುಷ್ಪ ಅವರ ಕುಟುಂಬಸ್ಥರು ವಿರೋಧಿಸಿ, ಯುವತಿಯ ಸೋದರ ಮಾವನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಇದನ್ನೂ ಓದಿ:ಮನೆಗೆ ಬಂದ್ರೆ ಚೆನ್ನಾಗಿ ನೋಡಿಕೊಳ್ಳುತ್ತೇವೆ, ಬರದೆ ಇದ್ರೆ ನಮ್ಮಪ್ಪನ ಮನೆ ಗಂಟು ಏನೂ ಹೋಗಲ್ಲ: ರೇವಣ್ಣ

ಇದರಿಂದಾಗಿ ಮನನೊಂದ ಪುಷ್ಪಲತ ಹಾಗೂ ತಿಪ್ಪೇಸ್ವಾಮಿ ಆಗಸ್ಟ್ 13 ರಂದು ಮನೆ ಬಿಟ್ಟು ತೆರಳಿದ್ದರು. ನಾಪತ್ತೆಯಾದ ಮಗಳ ಪತ್ತೆಗಾಗಿ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಆಕೆಯ ತಂದೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿವ ಪತ್ತೆಗಾಗಿ ಕ್ರಮ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಇಂದು ಕೂನಿಕೆರೆ ಗ್ರಾಮ ಬಳಿಯ ಕಾಲುವೆ ಬಳಿ ಇವರಿಬ್ಬರ ಶವ ಪತ್ತೆಯಾಗಿವೆ.

blank

ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಮುಂದುವರೆಸಿದ್ದಾರೆ. ಯುವತಿಯನ್ನು ಓದಿಸಿ ಸರ್ಕಾರಿ ಕೆಲಸಕ್ಕೆ ಸೇರಿಸಬೇಕೆಂಬ ಕನಸು ಕಂಡಿದ್ದ ಆಕೆಯ ತಂದೆ ಕನಸು ನುಚ್ಚುನೂರಾಗಿದೆ. ಇನ್ನೂ ಶವಗಳು ಪತ್ತೆಯಾದ ಹಿನ್ನೆಲ್ಲೆಯಲ್ಲಿ ಸ್ಥಳಕ್ಕೆ ಗ್ರಾಮದ ಮಹಿಳೆಯರು ಹಾಗು ಗ್ರಾಮಸ್ಥರು ಜಮಾವಣೆಯಾಗಿದ್ದೂ, ಹಿರಿಯೂರು ತಾಲೂಕು ಆಸ್ಪತ್ರೆಗೆ ಎರಡು ಶವಗಳನ್ನು ರವಾನಿಸಿಸಲಾಗಿದೆ. ಅಲ್ಲಿಗೂ ಧಾವಿಸಿರುವ ಯುವತಿಯ ಸಂಬಂಧಿಗಳು ಈ ಯುವತಿಯ ಸಾವಿನ ಹಿಂದೆ ಕೊಲೆಯ ಸಂಚು ನಡೆದಿರಬಹುದು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂಬ ಆಗ್ರಹ ಕೇಳಿಬಂದಿದೆ.ಇದನ್ನೂ ಓದಿ:ನೆರೆ ಪೀಡಿತ ಸಂತ್ರಸ್ತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ: ಉಮೇಶ್ ಕತ್ತಿ

Source: publictv.in Source link